ಮಡಿಕೇರಿ ಡಿ.೨೩ : ರಾಜ್ಯ ಒಕ್ಕಲಿಗರ ವೇದಿಕೆ ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ನೀಡುವ ಕರುನಾಡ ರತ್ನ ವಿಶೇಷ ಪ್ರಶಸ್ತಿಗೆ ಪೊನ್ನಂಪೇಟೆಯ ಭರತನಾಟ್ಯ ಕಲಾವಿದೆ ಪ್ರೇಕ್ಷ ಅಶೋಕ್ ಭಟ್ ಆಯ್ಕೆಯಾಗಿದ್ದಾರೆ.

ಇವರು ಮುಗುಟಗೇರಿ ನಿವಾಸಿ ವಿದ್ಯಾಶ್ರೀ, ಅಶೋಕ್ ಭಟ್ ದಂಪತಿಯ ಪುತ್ರಿ. ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ. ತಾ.೨೫ ರಂದು ಮೈಸೂರಿನ ಕಲಾಮಂದಿರದ ಕಿರು ರಂಗಮAದಿರದಲ್ಲಿ ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರೇಕ್ಷಾಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ವೇದಿಕೆಯ ಅಧ್ಯಕ್ಷ ಎಚ್.ಎಲ್.ಯಮುನಾ ತಿಳಿಸಿದ್ದಾರೆ.