ಸುAಟಿಕೊಪ್ಪ, ಡಿ.೨೧: ಕ್ರೆöÊಸ್ತ ಧರ್ಮೀಯರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಕ್ರೆöÊಸ್ತ ಬಾಂಧವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತಿçÃಯರು, ಸಂತ ಕ್ಲಾಸ್ ವೇಷಧಾರಿ, ಯುವಕ ಯುವತಿಯರು ಕ್ಯಾರೋಲ್ಸ್ ವೃಂದದವರು ಕ್ರೆöÊಸ್ತರ ಮನೆಗಳಿಗೆ ತೆರಳಿ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಾ ಕ್ರಿಸ್ತ ಜಯಂತಿಯ ಶುಭ ಸಂದೇಶವನ್ನು ಸಾರುವ ಶುಭಾಶಯ ಕೋರುವ ಕಾರ್ಯದಲ್ಲಿ ತೊಡಗಿದ್ದಾರೆ.