ಕಡಂಗ, ಡಿ. ೨೧: ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳದಿಂದ ಕೃಷಿ ಫಸಲು ನಾಶವಾಗಿದೆ. ಪ್ರತಿ ವರ್ಷವೂ ಬೆಟ್ಟ ಕಾಡುಗಳಿಂದ ಮಳೆಗಾಲದಲ್ಲಿ ಆಹಾರ ಅರಸಿ ಊರಿಗೆ ಲಗ್ಗೆ ಇಡುವ ಕಾಡಾನೆಗಳ ಹಿಂಡು, ಕಾಫಿ, ಬಾಳೆ, ಹಲಸು, ಸೇರಿ ತೋಟಗಳಲ್ಲಿದ್ದ ಫಸಲು ಹಾಳು ಮಾಡಿವೆ.
ಕಳೆದ ಎರಡು ದಿನಗಳ ಹಿಂದೆ ೧೦ ಆನೆಗಳ ಗುಂಪೊAದು ಕರಡ ಗ್ರಾಮದ ಪಟ್ರಪಂಡ ಪೊನ್ನು ಮೊಣ್ಣಪ್ಪ ಹಾಗೂ ನೆರಪಂಡ ಸುಷ ಅವರ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ನಾಶಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಓಡಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಬೋಪಣ್ಣ, ಪ್ರಕಾಶ್, ಝಕರಿಯ, ಸಹದ್ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.