ಸುಂಟಿಕೊಪ್ಪ, ಡಿ.೨೧: ಸುಂಟಿಕೊಪ್ಪ ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡವು ಸೋಮವಾರಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಡ್ಯಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಅಡ್ವೆಂಚರ್ ಡ್ಯಾನ್ಸ್ ಕಂಪನಿ ವತಿಯಿಂದ ತಾ.೧೯ ರಂದು ನಡೆದ ರಾಜ್ಯ ಮಟ್ಟದ ಡ್ಯಾನ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸುಂಟಿಕೊಪ್ಪದ ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡವು ಪಾಲ್ಗೊಂಡಿದ್ದು, ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ತಂಡದ ೧೦ ಮಂದಿ ಸದಸ್ಯರು ಭಾಗವಹಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡದ ಕೊರಿಯೋ ಗ್ರಾಫರ್ ಆಗಿ ಅಶ್ವಿನ್ ಡಿಸೋಜ ಕಾರ್ಯನಿರ್ವಹಿಸಿದ್ದರು.