ಸೋಮವಾರಪೇಟೆ, ಡಿ. ೨೧: ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿಸಲು ಅಗತ್ಯವಿರುವ ದಾಖಲೆ, ಭೂಪ್ರದೇಶ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಿ, ಸರ್ಕಾರದ ಮಟ್ಟದಲ್ಲಿ ಮರುಯತ್ನ ನಡೆಸಲು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಪAಚಾಯಿತಿಯ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಈ ಬಗ್ಗೆ ಸದಸ್ಯರುಗಳು ವಿಸ್ತೃತ ಚರ್ಚೆ ನಡೆಸಿದರು. ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪಂಚಾಯಿತಿ ಅಧಿಕಾರಿಗಳು ಇನ್ನಷ್ಟು ಕ್ರಿಯಾಶೀಲರಾಗಬೇಕೆಂಬ ಸಲಹೆ ಸಭೆಯಲ್ಲಿ ಕೇಳಿಬಂತು.
ಸೋಮವಾರಪೇಟೆ ತಾಲೂಕಿನಿಂದ ಬೇರ್ಪಟ್ಟ ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಸಂಬAಧ ಸೋಮವಾರಪೇಟೆಯಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಸಮರ್ಪಕವಾಗಿಲ್ಲ ಎಂದು ವಿಧಾನ ಸಭೆಯಲ್ಲಿ ಪೌರಾಡಳಿತ ಸಚಿವರು ತಿಳಿಸಿದ್ದಾರೆ. ಈ ಬಗೆಗಿನ ಮಾನದಂಡಗಳ ಮಾಹಿತಿ ನೀಡುವಂತೆ ಸದಸ್ಯರು, ಮುಖ್ಯಾಧಿಕಾರಿಯಲ್ಲಿ ಕೇಳಿದರು.
ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿಸಲು ಸರ್ಕಾರ ಹಲವಷ್ಟು ನಿಬಂಧನೆ ವಿಧಿಸಿದೆ. ೨೦ ಸಾವಿರ ಜನಸಾಂದ್ರತೆ, ಶೇ.೫೦ರಷ್ಟು ಕೃಷಿಯೇತರ ಚಟುವಟಿಕೆ, ೧ ಕಿ.ಮೀ. ವ್ಯಾಪ್ತಿಯಲ್ಲಿ ೧೫೦೦ ಜನಸಾಂದ್ರತೆ, ಕೈಗಾರಿಕೆಗಳು, ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ನಿರ್ಣಯ, ರೂ.೮೦೦ ತಲಾ ಆದಾಯ ಸೇರಿದಂತೆ ಇನ್ನಿತರ ನಿಬಂಧನೆಗಳಿವೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ೭೦೦೦ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಯಲ್ಲಿ ೫೪೦೦ ಜನಸಂಖ್ಯೆಯಿದ್ದು, ಹಾನಗಲ್ಲು, ಬೇಳೂರು ಪಂಚಾಯಿತಿಯ ಕೆಲ ಭಾಗಗಳನ್ನು ಸೇರಿಸಿ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ಜನಸಂಖ್ಯೆ ೨೦ ಸಾವಿರ ದಾಟಿಲ್ಲ. ಪಟ್ಟಣಕ್ಕೆ ಒತ್ತಿಕೊಂಡAತೆ ಕಾಫಿ ತೋಟ, ಗದ್ದೆಗಳೇ ಇವೆ. ಈಗಾಗಲೇ ೨ ಬಾರಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಈ ಹಿಂದೆ ಪುರಸಭೆಯ ಬೌಂಡರಿ ಗುರುತು ಮಾಡಿರುವುದು ಸರಿಯಾಗಿಲ್ಲ. ಚೌಡ್ಲು, ಹಾನಗಲ್ಲು, ಬೇಳೂರು ಹಾಗೂ ನೇರುಗಳಲೆ ಗ್ರಾ.ಪಂ.ಗಳನ್ನು ಸೇರಿಸಿಕೊಂಡು ಹೊಸದಾಗಿ ಬೌಂಡರಿ ಗುರುತು ಮಾಡಿ ಪುರಸಭೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಮಹೇಶ್, ಸೋಮೇಶ್ ಸಲಹೆ ನೀಡಿದರು.
ಈ ಬಗ್ಗೆ ಎರಡು ದಿನಗಳಲ್ಲಿ ಪಂಚಾಯಿತಿ ಸದಸ್ಯರ ವಿಶೇಷ ಸಭೆ ಕರೆದು, ವಿಸ್ತೃತ ಚರ್ಚೆ ನಡೆಸಲಾಗುವುದು. ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು.