ಸಿದ್ದಾಪುರ, ಡಿ. ೨೧: ಅಮ್ಮತ್ತಿ ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಅಮ್ಮತ್ತಿಯ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಭಿಜಿತ್ ಮುಂದಾಳತ್ವದಲ್ಲಿ ಅಮ್ಮತ್ತಿಯಲ್ಲಿ ಪ್ರತಿಭಟನೆ ನಡೆಯಿತು.
ಅಮ್ಮತ್ತಿ ಪಟ್ಟಣದಿಂದ ಪ್ರತಿಭಟನಾಕಾರರು ಬಾಳೆ ಗಿಡಗಳನ್ನು ಕೈಯಲ್ಲಿ ಹಿಡಿದುಕೊಂಡು ಗೋಣಿಕೊಪ್ಪ ರಸ್ತೆಯವರೆಗೆ ಮೆರವಣಿಗೆ ತೆರಳಿದರು. ರಸ್ತೆ ದುರಸ್ತಿ ಪಡಿಸುವಂತೆ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿದರು. ನಂತರ ಗೋಣಿಕೊಪ್ಪ ಹಾಗೂ ಪಾಲಿಬೆಟ್ಟ ರಸ್ತೆಯ ಮಧ್ಯ ಬಾಗದ ಮಾರ್ಕೆಟ್ ಬಳಿ ಆಟೋ ಚಾಲಕರು ಧರಣಿ ಕುಳಿತರು. ಪ್ರತಿಭಟನಾ ಸ್ಥಳಕ್ಕೆ ಲೊಕೋಪಯೋಗಿ ಇಲಾಖೆಯ ಮುಖ್ಯ ಅಧಿಕಾರಿಗಳು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸಂಘದ ಅಧ್ಯಕ್ಷ ಅಭಿಜಿತ್ ಮಾತನಾಡಿ, ಅಮ್ಮತ್ತಿ ಪಟ್ಟಣದ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಈ ರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಬೃಹತ್ ಗಾತ್ರದ ಗುಂಡಿ ಹೊಂಡಗಳಿAದ ಕೂಡಿದ್ದು, ರಸ್ತೆ ಅವ್ಯವಸ್ಥೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದರು. ಕಳೆದ ೧೪ ವರ್ಷಗಳಿಂದ ಈ ಬಾಗದ ರಸ್ತೆಗಳು ಹದಗೆಟ್ಟಿದ್ದರೂ ಕೂಡ ಸಂಬAಧಪಟ್ಟ ಇಲಾಖಾ ಧಿಕಾರಿಗಳು ನಿರ್ಲಕ್ಷö್ಯ ವಹಿಸಿರುವುದು ಖಂಡನೀಯ ಎಂದರು. ಕಳೆದ ಮೂರು ವರ್ಷಗಳ ಹಿಂದೆ ರಸ್ತೆ ದುರಸ್ಥಿಪಡಿಸುವ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಕೂಡ ಸಂಬAಧಪಟ್ಟ ಇಲಾಖಾ ಧಿಕಾರಿಗಳು ರಸ್ತೆ ದುರಸ್ಥಿ ಪಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಸ್ಥಳಕ್ಕೆ ವೀರಾಜಪೇಟೆ ಲೊಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸಿದ್ದೇಗೌಡ ಆಗಮಿಸಿ ಪ್ರತಿಭಟನಾ ಕಾರರ ಅಹವಾಲನ್ನು ಆಲಿಸಿದರು. ಮುಂದಿನ ಮೂರು ದಿನಗಳಲ್ಲಿ ಗುಂಡಿ ಆಗಿರುವ ರಸ್ತೆಗಳಿಗೆ ಕಲ್ಲು ಹಾಕಿ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು. ಪ್ರತಿಭಟನೆಯಲ್ಲಿ ಅಮ್ಮತ್ತಿ ಆಟೋ ಚಾಲಕರ ಮಾಲೀಕರ ಸಂಘದ ಗೌರವ ಅಧ್ಯಕ್ಷ ದೊಂಬಯ್ಯ, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಂಶೀದ್ ಹಾಗೂ ಅಗಸ್ತಿನಿ ಸೇರಿದಂತೆ ಇನ್ನಿತರರು ಇದ್ದರು.