ಗೋಣಿಕೊಪ್ಪ ವರದಿ, ಡಿ. ೨೦ : ನಿವೇಶನಕ್ಕೆ ಆಗ್ರಹಿಸಿ ಬುಡಕಟ್ಟು ಕಾರ್ಮಿಕರ ಸಂಘ ಪೊನ್ನಂಪೇಟೆ ಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ. ಬಿ. ಗಪ್ಪು ಮಾತನಾಡಿ, ಅಧಿಕಾರಿ ಯಿಂದ ದೊರೆತ ಭರವಸೆ ನಮಗೆ ವಿಶ್ವಾಸ ಮೂಡಿಸಿದೆ. ಅರ್ಜಿ ಸಲ್ಲಿಸಿ ಮತ್ತೆ ಹೋರಾಟ ಮುಂದುವರಿಸು ವುದಾಗಿ ತಿಳಿಸಿದರು.
ಪ್ರತಿಭಟನಾ ನಿರತ ಭವ್ಯ ಮಾತನಾಡಿ, ೨೦೧೭ ರಿಂದ ನಿವೇಶನಕ್ಕೆ ಹೋರಾಟ ಮಾಡುತ್ತಿದ್ದೇವೆ. ಆದರೂ ಸ್ಪಂದನ ಸಿಗುತ್ತಿಲ್ಲ. ಹೋರಾಟ ನಿರಂತರವಾಗಿ ನಡೆಸುತ್ತೇವೆ ಎಂದರು. ಸಂಘದ ಸದಸ್ಯೆ ಲಲಿತಾ ಮಾತನಾಡಿ, ಅಧಿಕಾರಿಗಳು ನಮ್ಮ ಲೈನ್‌ಮನೆಯಲ್ಲಿ ಪ್ರಾಯೋಗಿಕವಾಗಿ ವಾಸ ಮಾಡಿ ನೋಡಿದರೆ ಸಮಸ್ಯೆ ಅರಿವಾಗುತ್ತದೆ ಎಂದು ನೋವು ಹಂಚಿಕೊAಡರು.
ಸಮಸ್ಯೆ ಆಲಿಸಿದ ವೀರಾಜಪೇಟೆ ತಾಲೂಕು ಪಂಚಾಯಿತಿ ತಾಲೂಕು ಆಡಳಿತ ಅಧಿಕಾರಿ ಪಿ. ಲಕ್ಷಿö್ಮ, ನಿಯಮನುಸಾರ ಅರ್ಜಿ ಸಲ್ಲಿಸಿ ಸರ್ಕಾರದಿಂದ ನಿವೇಶನ ಪಡೆಯಬೇಕು ಎಂದು ಸಲಹೆ ನೀಡಿದ ಹಿನ್ನೆಲೆ, ಪ್ರತಿಭಟನೆಯನ್ನು ಕೈಬಿಡಲಾಯಿತು. ನಿವೇಶನ ರಹಿತರು ಮತ್ತು ವಸತಿ ರಹಿತರು ಹೇಗೆ ಸವಲತ್ತು ಪಡೆದುಕೊಳ್ಳಬೇಕು ಎಂಬ ನಿಯಮ ತಿಳಿಸಿಕೊಟ್ಟರು. ಇದರಂತೆ ಗ್ರಾಮ ಮಟ್ಟದಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದರು.
ನಿವೇಶನ ರಹಿತರು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದಿಂದ ನಿವೇಶನ ಪಡೆಯಲು ಅರ್ಜಿ ಸಲ್ಲಿಸಬೇಕು. ಇದನ್ನು ಇಒ ಕಚೇರಿಯಿಂದ ಅರ್ಹ ಫಲಾನುಭವಿಯ ಪಟ್ಟಿ ಮಾಡಿ ತಹಶೀಲ್ದಾರ್‌ಗೆ ಕಳುಹಿಸಲಾಗುತ್ತದೆ. ನಂತರ ಜಿಲ್ಲಾಧಿಕಾರಿ ಮೂಲಕ ನಿವೇಶನ ಕಲ್ಪಿಸಲು ಕ್ರಮಕೈಗೊಳ್ಳ ಲಾಗುತ್ತದೆ. ಸರ್ಕಾರ ನೀಡುವ ನಿವೇಶನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ನೀವು ಹೀಗೆ ನಿಯಾಮನುಸಾರ ಅರ್ಜಿ ಸಲ್ಲಿಸದಿದ್ದರೆ ಪ್ರಯೋಜನವಾಗುವುದಿಲ್ಲ ಎಂದು ಮನದಟ್ಟು ಮಾಡಿಕೊಟ್ಟರು. ಫಲಾನುಭವಿಗೆ ಸೂಕ್ತ ದಾಖಲಾತಿ ಬೇಕು. ದಾಖಲಾತಿ ಒದಗಿಸಿಕೊಂಡು ಮುಂದುವರಿಯಲು ಸಲಹೆ ನೀಡಿದರು.
ನಾನು ಕೂಡ ಲೈನ್‌ಮನೆಯಲ್ಲಿ ಬೆಳೆದು ಬಂದಿದ್ದೇನೆ. ನನ್ನ ಪಾಲಕರು ನನ್ನನ್ನು ಬಾಲ್ಯಾವಸ್ಥೆಯಲ್ಲಿ ಕೂಲಿ ಕೆಲಸಕ್ಕೆ ಕಳುಹಿಸಲಿಲ್ಲ. ಪಾಲಕರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವುದು ಅಪರಾಧ, ಮಾಲೀಕರಿಗೆ ಮಾತ್ರವಲ್ಲದೆ ಪಾಲಕರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದರು. ನಮ್ಮ ಮಕ್ಕಳನ್ನು ಲೈನ್‌ಮನೆ ಮಾಲೀಕರು ಕೂಲಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರ ಆರೋಪಕ್ಕೆ ಹೀಗೆ ಪ್ರತಿಕ್ರಿಯೆ ನೀಡಿ, ಮಕ್ಕಳ ಪೋಷಣೆ ಬಗ್ಗೆ ಜಾಗೃತಿ ಮೂಡಿಸಿದರು. ತಾಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ, ಗಿರಿಜನ ಅಭಿವೃದ್ದಿ ಅಧಿಕಾರಿ ಗುರುಶಾಂತಪ್ಪ ಇದ್ದರು.