ಕೂಡಿಗೆ, ಡಿ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಸಮೀಪದ ಹಾರಂಗಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಂದಾಜು ೫೦ ವರ್ಷ ಪ್ರಾಯದ ಪುರುಷನ ಶವವೊಂದು ಪತ್ತೆಯಾಗಿದೆ.

ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ಶವವನ್ನು ನದಿಯಿಂದ ತಗೆದು ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿದರು. ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ, ಪೊಲೀಸ್, ಸಹಾಯಕ ಠಾಣಾಧಿಕಾರಿ ರವಿ, ಸಿಬ್ಬಂದಿಗಳಾದ ಧನುಷ್ಯ, ಶನತ್, ಮಂಜುನಾಥ, ಚಾಲಕ ಯೋಗೇಶ್ ಇದ್ದರು.