ಗೋಣಿಕೊಪ್ಪಲು, ಡಿ. ೧೯: ಕಸಾಪದಿಂದ ಪೊನ್ನಂಪೇಟೆ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೧ ರಂದು ಸಂಜೆ ೫.೦೦ ಗಂಟೆಗೆ ಗೋಣಿಕೊಪ್ಪಲಿನ ಕಾಮತ್ ನವಮಿ ಸಭಾಂಗಣದಲ್ಲಿ ಕಸಾಪ ಪೊನ್ನಂಪೇಟೆ ತಾಲೂಕು ಸದಸ್ಯರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.