ಮಡಿಕೇರಿ, ಡಿ. ೧೯: ಮೈಸೂರು ರಂಗಾಯಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಭಾರತ ಸಂವಿಧಾನದ ಆಶಯ ಕುರಿತ ‘‘ಸೂತ್ರಧಾರ’’ ಎಂಬ ನಾಟಕವನ್ನು ಸಿದ್ಧಪಡಿಸಿ ಇದೀಗ ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.
ಭಾರತ ಸಂವಿಧಾನದ ಆಶಯಗಳನ್ನು ಒಳಗೊಂಡ ಈ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದ ಎಸ್. ರಾಮನಾಥ ರಚಿಸಿದ್ದು, ಮಹೇಶ್ ಕಲ್ಲತ್ತಿ ನಿರ್ದೇಶನ ಮಾಡಿದ್ದಾರೆ. ತಾ.೨೭ರಂದು ಮಡಿಕೇರಿ ವಿದ್ಯಾ ಭವನದ ರಂಗಮAದಿರದಲ್ಲಿ ಸಂಜೆ ೬.೩೦ಕ್ಕೆ ಈ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾ ಭವನ ಕೊಡಗು ಅಧ್ಯಕ್ಷ ಕೆ.ಎಸ್. ದೇವಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೂತನ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ. ರಂಗಾಯಣದ ನಿರ್ದೇಶಕರಾದ ಶ್ರೀ ಅಡ್ಡಂಡ ಕಾರ್ಯಪ್ಪ ಉಪಸ್ಥಿತರಿರಲಿದ್ದಾರೆ.