ಮಡಿಕೇರಿ, ಡಿ. ೧೯ : ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸದನದಲ್ಲಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ.
ಮಹಿಳಾ ಮೋರ್ಚಾ ಅಧ್ಯಕ್ಷೆ ಬಡುವಂಡ್ರ ಕವಿತ ಬೆಳ್ಯಪ್ಪ, ಪ್ರ. ಕಾರ್ಯದರ್ಶಿ ತುಮುತ್ತಜ್ಜೀರ ಕುಮುದ ರಶ್ಮಿ, ಉಮಾಪ್ರಭು ಹೇಳಿಕೆ ನೀಡಿದ್ದು, ಇಂತಹ ಕೀಳು ಮಟ್ಟದ ಮಾತು ಶೋಭೆ ತರುವಂತದಲ್ಲ ಎಂದು ತಿಳಿಸಿದ್ದಾರೆ.