೨೪ ಗಂಟೆಗಳಲ್ಲಿ ೨ ಕೊಲೆ-ಕಪುರ್ತಲಾದಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ಸಾವು!
ಪಂಜಾಬ್, ಡಿ. ೧೯: ಸಿಖ್ ಧಾರ್ಮಿಕ ಧ್ವಜ ತೆಗೆಯಲು ಯತ್ನ ಆರೋಪ ಹಿನ್ನಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಪಂಜಾಬ್‌ನಲ್ಲಿ ಇಬ್ಬರನ್ನು ಥಳಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಪುರ್ತಲಾ ಜಿಲ್ಲೆಯ ಗುರುದ್ವಾರದಲ್ಲಿ ಧಾರ್ಮಿಕ ಧ್ವಜವನ್ನು ತೆಗೆಯಲು ಯತ್ನಿಸಿದ ಆರೋಪದ ಮೇಲೆ ಸಿಖ್ ಭಕ್ತರು ಓರ್ವ ವ್ಯಕ್ತಿಯನ್ನು ಹಿಡಿದು ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾನೆ. ಕಪುರ್ತಲಾದ ನಿಜಾಂಪುರ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಈ ವ್ಯಕ್ತಿ ನಿಜಾಂಪುರದ ಗುರುದ್ವಾರದಲ್ಲಿ ಸಿಖ್ಖರ ಧಾರ್ಮಿಕ ಧ್ವಜವಾದ ನಿಶಾನ್ ಸಾಹಿಬ್‌ನನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿರುವ ಭಕ್ತರು ಚೆನ್ನಾಗಿ ಥಳಿಸಿದ್ದಾರೆ. ಪೊಲೀಸರು ಮತ್ತು ಇತರ ಯಾವುದೇ ಏಜೆನ್ಸಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು. ಇಂತಹ ಪ್ರಕರಣಗಳು ನಡೆಯಲು ಪಂಜಾಬ್ ಪೊಲೀಸರು ಮತ್ತು ರಾಜ್ಯ ಸರ್ಕಾರ ಜವಾಬ್ದಾರರಾಗಿರುತ್ತಾರೆ ಎಂದು ಗುರುದ್ವಾರದಿಂದ ಮಾಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶನಿವಾರ ಸಂಜೆ, ಅಮೃತಸರದ ಗೋಲ್ಡನ್ ಟೆಂಪಲ್‌ನೊಳಗೆ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಲಾಗಿದೆ. ಅಮೃತಸರ ಪೊಲೀಸರು ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ಮತ್ತು ಸುತ್ತಮುತ್ತ ಕಟ್ಟೆಚ್ಚರ ವಹಿಸಿದ್ದಾರೆ. ಶನಿವಾರ ಸಂಜೆ ಆರೋಪಿಯನ್ನು ಹೊಡೆದು ಕೊಂದ ಸ್ಥಳದಲ್ಲಿ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗದ ಕಾರಣ ಪೊಲೀಸರು ಈಗ ಬಯೋಮೆಟ್ರಿಕ್ ಫಿಂಗರ್‌ಪ್ರಿAಟ್ ಸ್ಕಾö್ಯನಿಂಗ್ ಮೂಲಕ ತನಿಖೆ ಆರಂಭಿಸಿದ್ದಾರೆ.
ಕರವೇ ಕಾರ್ಯಕರ್ತರಿಂದ ಪ್ರತಿಭಟನೆ-ಪೊಲೀಸರ ಲಾಠಿಚಾರ್ಜ್
ಬೆಳಗಾವಿ-ಬೆಂಗಳೂರು, ಡಿ. ೧೯: ಬೆಳಗಾವಿಯಲ್ಲಿ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಉದ್ವಿಗ್ನವಾಗುತ್ತಿದೆ. ಪುಂಡರು ನಿನ್ನೆ ನಸುಕಿನ ಜಾವ ಧ್ವಂಸಗೊಳಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸರಿಪಡಿಸಿ ಸ್ಥಳೀಯರು ಭಾನುವಾರ ಪುನರ್ ಪ್ರತಿಷ್ಠಾಪಿಸಿದ್ದಾರೆ. ನಂತರ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಸ್ಥಳೀಯ ಮತ್ತು ಕನ್ನಡಪರ ಮುಖಂಡರು ಪೂಜೆ ಸಲ್ಲಿಸಲಿದ್ದಾರೆ. ಜೈ ಜೈ ರಾಯಣ್ಣ, ಜೈ ಜೈ ಚೆನ್ನಮ್ಮ ಎಂದು ಘೋಷಣೆ ಕೂಗಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದ್ದು, ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇನ್ನು ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗದ್ದಲ ಮತ್ತು ಸಮಾಜದ ಶಾಂತಿಯನ್ನು ಕೆಡಿಸುವ ಕೆಲಸವನ್ನು ಖಂಡಿಸಿ ಕರವೇ ಕಾರ್ಯಕರ್ತರು ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಿರನವಾಡಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ. ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದನ್ನು ಖಂಡಿಸಿ ಕರವೇ ಕಾರ್ಯಕರ್ತರು ಮೆರವಣಿಗೆ ಹೊರಟಿದ್ದರು. ಈ ವೇಳೆ ಪ್ರತಿಭಟನಾಕಾರನ್ನು ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆಯುವುದನ್ನು ವಿರೋಧಿಸಿದ ಹೋರಾಟಗಾರರು, ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಲಾಠಿ ಹಿಡಿದು ಪೊಲೀಸರು ಧರಣಿ ನಿರತರನ್ನು ಚದುರಿಸಿದ್ದಾರೆ. ಮಹಾರಾಷ್ಟç ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದರು. ಕರವೇ ಶಿವರಾಮೇಗೌಡ ಬಣ ಜಿಲ್ಲಾಧ್ಯಕ್ಷ ವಾಜೀದ್ ಸೇರಿ ೨೦ಕ್ಕೂ ಅಧಿಕ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋಡೆ ಕುಸಿದು ಇಬ್ಬರು ಮಹಿಳಾ ಕಾರ್ಮಿಕರು ಸಾವು
ಮಂಗಳೂರು, ಡಿ. ೧೯: ನವೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮನೆಯ ಗೋಡೆ ಕುಸಿದು ಬಿದ್ದು ಇಬ್ಬರು ಮಹಿಳಾ ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಸುಳ್ಯದ ಯೆನ್ಮೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹರೀಶ್ ನಾಯ್ಕ್ ಎಂಬವರ ಮನೆಯ ಶೌಚಾಲಯದ ಗೋಡೆಯನ್ನು ಕಾರ್ಮಿಕರು ಕೆಡವುತ್ತಿದ್ದರು. ಇಬ್ಬರು ಕಾರ್ಮಿಕರಾದ ಬಿಪಾತುಮ್ಮ (೬೦) ಮತ್ತು ನೆಬಿಸಾ (೪೫) ಇತರರೊಂದಿಗೆ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಶೌಚಾಲಯದ ಗೋಡೆ ಕುಸಿದು ಇಬ್ಬರೂ ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರನ್ನೂ ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಚಳಿಯೋ ಚಳಿ: ಮಂಜು ಮುಸುಗಿದ ವಾತಾವರಣ
ನವದೆಹಲಿ, ಡಿ. ೧೯: ದೆಹಲಿ ಜನರು ಚಳಿಯಲ್ಲಿ ಗಡಗಡ ನಡುಗುತ್ತಿದ್ದು ಇನ್ನೂ ಮುಂದೆ ಇಷ್ಟೇ ಚಳಿ ಅನುಭವಿಸಬೇಕಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದು ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ೪.೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದೊAದಿಗೆ ತಾ. ೧೯ ರಂದು ರಾಷ್ಟç ರಾಜಧಾನಿ ಅತ್ಯಂತ ಚಳಿಯನ್ನು ದಾಖಲಿಸಿದೆ. ಉತ್ತರ ಭಾರತದಾದ್ಯಂತ ಶೀತಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ಈ ಪ್ರದೇಶದ ಹಲವಾರು ಭಾಗಗಳಲ್ಲಿ ತಾಪಮಾನವು ಹಿಮಭರಿತ ಗಾಳಿಯಿಂದಾಗಿ ಕುಸಿದಿದೆ. ರಾಷ್ಟç ರಾಜಧಾನಿ ದೆಹಲಿಯಲ್ಲಿ ಕನಿಷ್ಟ ನಾಲ್ಕು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜೊತೆಗೆ ನೋಯ್ಡಾದಲ್ಲಿ ಕನಿಷ್ಟ ತಾಪಮಾನವು ೮.೮ ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದ್ದು ಇದು ಈ ತಿಂಗಳ ಅತ್ಯಂತ ಚಳಿಯ ದಿನವಾಗಿದೆ. ನಗರದಲ್ಲಿ ಗರಿಷ್ಠ ತಾಪಮಾನವು ೧೮ ಡಿಗ್ರಿಯಲ್ಲಿ ದಾಖಲಾಗಿದೆ. ಇದು ಸಾಮಾನ್ಯ ಮಟ್ಟಕ್ಕಿಂತ ಐದು ಪಟ್ಟು ಕಡಿಮೆಯಾಗಿದೆ. ಒಂದು ನಗರವು ೧೦ ಡಿಗ್ರಿಗಿಂತ ಕಡಿಮೆ ತಾಪಮಾನವನ್ನು ದಾಖಲಿಸಿದಾಗ ಮತ್ತು ಗರಿಷ್ಠ ತಾಪಮಾನವು ೪.೫ ಆಗಿರುತ್ತದೆ. ನಂತರ ಅದನ್ನು 'ಶೀತ ಅಲೆ' ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ವಾಯುವ್ಯ ಭಾರತವು ಮುಂದಿನ ವಾರದಲ್ಲಿ ಶೀತ ಅಲೆಯಂತಹ ಪರಿಸ್ಥಿತಿಗಳಿಗೆ ಸಾಕ್ಷಿಯಾಗಲಿದೆ. ಮುಂದಿನ ದಿನಗಳಲ್ಲಿ ದೆಹಲಿಯು ತಂಪಾದ ಹವಾಮಾನವನ್ನು ವೀಕ್ಷಿಸುವುದನ್ನು ಮುಂದುವರೆಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಓಮಿಕ್ರಾನ್ ಸಮುದಾಯಕ್ಕೆ ವೇಗವಾಗಿ ಹಬ್ಬುತ್ತಿದೆ; ಡಬ್ಲ್ಯುಎಚ್‌ಒ
ನವದೆಹಲಿ, ಡಿ. ೧೯: ಕೋವಿಡ್ ರೂಪಾಂತರಿ ವೈರಸ್ ಸಮುದಾಯಕ್ಕೆ ಹಬ್ಬಿರುವ ದೇಶಗಳಲ್ಲಿ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ೮೯ ದೇಶಗಳಲ್ಲಿ ಇದುವರೆಗೂ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಜಗತ್ತಿನಲ್ಲಿಯೇ ತಲ್ಲಣ ಉಂಟು ಮಾಡಿರುವ ಓಮಿಕ್ರಾನ್ ಕುರಿತು ಇತ್ತೀಚಿನ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್ ರೂಪಾಂತರಿ ವೈರಸ್ ಡೆಲ್ಟಾಗಿಂತ ವೇಗವಾಗಿ ಓಮಿಕ್ರಾನ್ ಹರಡುತ್ತಿದೆ. ಅಮೆರಿಕದಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇ ೪೫ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಕೊರೊನಾ ಹರಡದಂತೆ ತಡೆಯಲು ಈಗ ಇರುವ ಮಾರ್ಗಸೂಚಿಯ ಮೂಲಕವೇ ಓಮಿಕ್ರಾನ್ ಹರಡುವಿಕೆ ತಡೆಗಟ್ಟಬಹುದು. ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮಾಡುವುದು, ಹೆಚ್ಚು ಜನರು ಸೇರುವ ಪ್ರದೇಶಗಳಿಗೆ ತೆರಳುವುದನ್ನು ತಡೆಯುವ ಮೂಲಕ ಜನರು ಜಾಗೃತವಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕೇವಲ ಒಂದು ಡೋಸ್ ಲಸಿಕೆ ಪಡೆದವರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ನ್ಯೂಯಾರ್ಕ್ನಲ್ಲಿ ಶುಕ್ರವಾರ ೨೧,೦೨೭ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಆರಂಭವಾದ ಬಳಿಕ ಮೊದಲ ಬಾರಿಗೆ ಒಂದು ದಿನ ಇಷ್ಟು ಪ್ರಕರಣ ಪತ್ತೆಯಾಗಿದ್ದು, ಅಮೆರಿಕದ ಆರೋಗ್ಯ ಸಚಿವಾಲಯ ಸೋಂಕು ಹರಡುವಿಕೆ ಕುರಿತು ಅಧ್ಯಯನ ಆರಂಭಿಸಿದೆ.