ಒಂದೇ ವೇದಿಕೆಯಲ್ಲಿ ಹತ್ತಾರು ಕಲಾವಿದರಿಂದ ಚಿತ್ರ

ಮಡಿಕೇರಿ, ಡಿ. ೧೮: ಸಾಧಿಕ್ ಆರ್ಟ್ ಲಿಂಕ್ಸ್ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಹತ್ತು ದಿನ ಕಲಾ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಕಲಾವಿದ ಸಾಧಿಕ್ ತಿಳಿಸಿದ್ದಾರೆ.

ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ತಾ. ೨೧ ರಿಂದ ೩೧ರ ತನಕ ನಡೆಯಲಿರುವ ಕಲಾ ಉತ್ಸವದಲ್ಲಿ ಜಿಲ್ಲೆಯವರೂ ಸೇರಿದಂತೆ ರಾಜ್ಯದ ಹಲವೆಡೆಯಿಂದ ಕಲಾವಿದರು ಭಾಗವಹಿಸಲಿದ್ದಾರೆ.

ಮೊಗರಗಲ್ಲಿ ಆರ್ಟ್ ಲಿಂಕ್ಸ್ ಕಲಾ ಭೂಮಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಕಲಾಕೃತಿಗಳ ನಿರ್ಮಾಣ, ಪ್ರದರ್ಶನ ಹಾಗೂ ಶಿಬಿರ ನಡೆಯಲಿದೆ.

ಕಲಾ ಉತ್ಸವವು ೨೦೧೭ ರಿಂದ ಪ್ರತಿವರ್ಷ ನಡೆಯುತ್ತಿದ್ದು, ರಾಜ್ಯದ ಹಲವು ಪ್ರತಿಭಾನ್ವಿತ ಕಲಾವಿದರು ಭಾಗವಹಿಸುತ್ತಿದ್ದಾರೆ.