ಗೋಣಿಕೊಪ್ಪ ವರದಿ, ಡಿ. ೧೮: ಕಾವೇರಿ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಅನ್ನು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಉದ್ಘಾಟಿಸಿದರು.

ಕಾಲೇಜು ಹಳೆಯ ವಿದ್ಯಾರ್ಥಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಉದ್ಯೋಗಿ ಪಿ. ವಿ ವಿಬಿಷ್ ಮಾತನಾಡಿ, ಉದ್ಯೋಗ ಸೃಷ್ಠಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ನಮ್ಮ ಪ್ರಯತ್ನದಿಂದ ಮುಂದುವರಿಯಲು ಅವಕಾಶವಿದೆ. ವಿದ್ಯಾರ್ಥಿ ಜೀವನದಲ್ಲಿ ಮಾಡುವ ತಪ್ಪನ್ನು ತಿದ್ದಲು ಇರುವ ಗುರುಗಳ ನಂತರದ ದಿನಗಳಲ್ಲಿ ದೊರೆಯು ವುದಿಲ್ಲ. ಇದನ್ನು ಅರಿತುಕೊಂಡು ವೃತ್ತಿ ಮತ್ತು ಬದುಕಿನಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕಿದೆ ಎಂದು ಸಲಹೆ ನೀಡಿದರು.

ಕಾವೇರಿ ಅಲುಮ್ನಿ ಅಸೋಸಿಯೇಷನ್ ಉಪಾಧ್ಯಕ್ಷ ತಿರುನೆಲ್ಲಿಮಾಡ ಎಂ. ದೇವಯ್ಯ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಆರ್ಥಿಕ ಸಹಕಾರದಿಂದ ಲ್ಯಾಬ್ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಇಲ್ಲಿ ತಂತ್ರಜ್ಞಾನ ಪೂರಕ ಅಭಿವೃದ್ಧಿ ಯೋಜನೆ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೂಡ ಇದು ನೆರವಾಗುವಂತಾಗಿದೆ. ತಂತ್ರಜ್ಞಾನ ದೊಂದಿಗೆ ನಾವು ಬೆಳವಣಿಗೆ ಕಾಣಬೇಕು ಎಂದರು.

ಪ್ರಾAಶುಪಾಲ ಮಾಳೇಟಿರ ಬಿ. ಕಾವೇರಪ್ಪ ಕಟ್ಟಡ ನಿರ್ಮಾಣಕ್ಕೆ ಹಳೆಯ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ತಂತ್ರಜ್ಞಾನದ ಮೂಲಕ ಕಂಪ್ಯೂಟರ್ ವಿಜ್ಞಾನ ಬೋಧನೆಗೆ ನೆರವಾಗುತ್ತಿದೆ ಎಂದರು.

ಕಾಲೇಜು ಆಂತರಿಕ ಗುಣಾತ್ಮಕ ಭರವಸೆ ಸಮಿತಿ ಸಂಚಾಲಕಿ ಎಂ. ಎಸ್. ಭಾರತಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಇದ್ದರು.