ತಾ.೨೮ ರಂದು ಪರೀಕ್ಷೆ

ಮಡಿಕೇರಿ, ಡಿ.೧೮: ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್(ಪುರುಷ ಮತ್ತು ಮಹಿಳಾ) ಒಟ್ಟು ೫೦ ಹುದ್ದೆಗಳ ನೇಮಕಾತಿ ಸಂಬAಧ ಈಗಾಗಲೇ ಲಿಖಿತ ಪರೀಕ್ಷೆಗೆ ಹಾಜರಾಗಿ ೧:೫ರ ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ತಾ. ೨೮ ರಂದು ಬೆಳಿಗ್ಗೆ ೬.೩೦ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ತಾ. ೨೮ ರಂದು ಬೆಳಿಗ್ಗೆ ೬.೩೦ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಜರಿರುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ತಿತಿತಿ.ಞsಠಿ.gov.iಟಿ ರಲ್ಲಿ ಪಡೆಯಬಹುದು.ಈ ಪಂದ್ಯಾವಳಿಯಲ್ಲಿ ಕೂಡಿಗೆಯ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ನಗದು ಮತ್ತು ಟ್ರೋಫಿ ತನ್ನಾದಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಬ್ಯಾಡಗೊಟ್ಟದ ಅಣ್ಣಯ್ಯ ಫ್ರೆಂಡ್ಸ್ ತಂಡ, ತೃತೀಯ ಸ್ಥಾನವನ್ನು ಚಿನ್ನನಹಳ್ಳಿ ತಂಡ ಪಡೆದಿದೆ ಬಹುಮಾನವನ್ನು ಭುವನಗಿರಿ ಗ್ರಾಮದ ರೈತ ಮುಖಂಡರು ವಿತರಣೆ ಮಾಡಿದರು. ಈ ಸಂದರ್ಭ ಯುವಕ ಸಂಘದ ಶಿವ, ಪ್ರಸನ್ನ, ಅಭಿ, ಅಜಯ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.