ಮಡಿಕೇರಿ, ಡಿ. ೧೮: ರೋಟರಿ ಮಡಿಕೇರಿ ವತಿಯಿಂದ ಮೂರ್ನಾಡಿನ ಮೂರ್ನಾಡ್ ಎಜುಕೇಶನಲ್ ಸೊಸೈಟಿ ಶಾಲೆಯ ವಿದ್ಯಾರ್ಥಿಗಳಿಗೆ ೫೦ ವಿದ್ಯಾಸೇತು ಪುಸ್ತಕಗಳನ್ನು ವಿತರಿಸಲಾಯಿತು. ರೋಟರಿ ಮಡಿಕೇರಿ ಅಧ್ಯಕ್ಷ ರೋಟರಿಯನ್ ಎನ್.ಡಿ. ಅಚ್ಚಯ್ಯ ಮಾತನಾಡಿ, ವಿದ್ಯಾಸೇತು ಕಾರ್ಯಕ್ರಮದ ಉದ್ದೇಶದ ಕುರಿತು ವಿವರಿಸಿದರು.

ಎಜುಕೇಶನಲ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಪ್ಪಣ್ಣ ಆಡಳಿತಾಧಿಕಾರಿ ಸುಬ್ರಮಣಿ, ಮುಖ್ಯೋಪಾಧ್ಯಾಯರಾದ ರಶ್ಮಿ, ರೋಟರಿ ಮಡಿಕೇರಿಯ ಚುನಾಯಿತ ಉಪ ರಾಜ್ಯಪಾಲ ರೋಟರಿಯನ್ ರತನ್ ತಮ್ಮಯ್ಯ, ಲಲಿತಾ ರಾಘವನ್, ಗೀತಾ ಗಿರೀಶ್, ಮಲ್ಲಿಗೆ ಪೈ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.