ಕಣಿವೆ, ಡಿ. ೧೮: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಮುಂಬದಿ ರಾಷ್ಟಿçÃಯ ಹೆದ್ದಾರಿಯಂಚಿನಲ್ಲಿರುವ ಪ್ರಯಾಣಿಕರ ತಂಗುದಾಣ ಕಸ ತ್ಯಾಜ್ಯಗಳಿಂದ ತುಂಬಿ ಹೋಗಿದೆ. ಮಾತ್ರವಲ್ಲ, ತಂಗುದಾಣದೊಳಗಿನ ಕಾಂಕ್ರೀಟ್ ಆಸನ ಒಂದು ಬದಿಯಲ್ಲಿ ಸಂಪೂರ್ಣ ಕಿತ್ತು ಹೋಗಿದೆ. ಆದಾಗ್ಯೂ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಈ ತಂಗುದಾಣದ ಸ್ವಚ್ಛತೆಗೆ ಮುಂದಾಗಿಲ್ಲ. ಜೊತೆಗೆ ಕಿತ್ತು ನಿಂತ ಕಾಂಕ್ರಿಟ್ ಆಸನದ ಸುಸ್ಥಿತಿಗೂ ಮುಂದಾಗಿಲ್ಲ. ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಇದೇ ಅಶುಚಿತ್ವದ ತಂಗುದಾಣದೊಳಗೆ ವಿರಮಿಸುತ್ತಾ ಇರುವುದು ವಿಪರ್ಯಾಸ.

ಹಾಗಾಗಿ ಪಂಚಾಯಿತಿ ಪಿಡಿಓ ಒಮ್ಮೆ ಇತ್ತ ಗಮನಹರಿಸಿ ತಂಗುದಾಣದ ಸ್ವಚ್ಛತೆಯೊಂದಿಗೆ ಕಿತ್ತು ನಿಂತ ಗಾರೆಯನ್ನು ಸರಿಪಡಿಸಬೇಕು. ಅಲ್ಲದೇ ಆ ತಂಗುದಾಣವನ್ನು ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಾಗಿ ಬಳಕೆ ಮಾಡುವುದರಿಂದ ಕಾಲೇಜು ವತಿಯಿಂದಲೇ ಸ್ವಚ್ಛತೆ ಹಾಗೂ ನಿರ್ವಹಣೆಗೆ ಒತ್ತು ನೀಡುವಂತೆ ಕ್ರಮಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಅಭಿಮತವಾಗಿದೆ.