ಮಡಿಕೇರಿ, ಡಿ. ೧೬: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನ ೨೦೨೦-೨೧ನೇ ಸಾಲಿನ ಮಹಾಸಭೆ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ತಾ. ೧೮ ರಂದು ನಡೆಯಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕು ಪ್ರಸ್ತುತ ೨೪೬೬ ಮಂದಿ ಸದಸ್ಯರನ್ನು ಹೊಂದಿದ್ದು, ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ. ೧೪೮.೨೩ ಲಕ್ಷ ಸಂಗ್ರಹವಾಗಿದೆ.

ಬ್ಯಾಂಕು ಪ್ರಸ್ತುತ ರೂ. ೩೬೪೦.೭೧ ಲಕ್ಷದಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ಒಟ್ಟು ರೂ. ೩೭೨.೬೮ ಲಕ್ಷದಷ್ಟು ವಹಿವಾಟು ನಡೆಸಿದೆ. ಬ್ಯಾಂಕಿನ ಸಾಲದ ಒಟ್ಟಾರೆ ವಸೂಲಾತಿ ಶೇ. ೯೮.೫೭ ರಷ್ಟಾಗಿದ್ದು, ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿದೆ ಎಂದು ತಿಳಿಸಿದರು.

ಬ್ಯಾಂಕು ೨೦೨೦-೨೧ನೇ ಸಾಲಿನಲ್ಲಿ ಒಟ್ಟಾರೆ ೨೬.೨೬ ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ. ಪ್ರಕೃತಿ ವಿಕೋಪ, ಕೊರೊನಾ ಹಿನ್ನೆಲೆ ಬ್ಯಾಂಕಿನ ವ್ಯವಹಾರ ಕುಂಠಿತ ಗೊಂಡರೂ ಚೇತರಿಸಿಕೊಂಡು ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡಿದೆ. ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಇದರ ಸೌಲಭ್ಯ ಪಡೆದುಕೊಳ್ಳಬಹುದು ಎಂದ ಗಳಿಸಿದೆ. ಪ್ರಕೃತಿ ವಿಕೋಪ, ಕೊರೊನಾ ಹಿನ್ನೆಲೆ ಬ್ಯಾಂಕಿನ ವ್ಯವಹಾರ ಕುಂಠಿತ ಗೊಂಡರೂ ಚೇತರಿಸಿಕೊಂಡು ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡಿದೆ. ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಇದರ ಸೌಲಭ್ಯ ಪಡೆದುಕೊಳ್ಳಬಹುದು ಎಂದ