ಗೋಣಿಕೊಪ್ಪಲು, ಡಿ. ೧೬: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೋಣಿಕೊಪ್ಪಲು, ಡಿ. ೧೬: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಪಿ. ಕೇಶವ್ ಕಾಮತ್ ಅವರನ್ನು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಡೆಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ವರ್ತಕ ಹಾಗೂ ಚೇಂಬರ್ ನಿರ್ದೇಶಕ ಅಜಿತ್ ಅಯ್ಯಪ್ಪ, ಕನ್ನಡ ಭಾಷೆಯನ್ನು ಉಳಿಸಲು ನಾಡಿನ ಜನರ ಜವಾಬ್ದಾರಿ ಹೆಚ್ಚಿದೆ. ಪರ ಭಾಷೆಯ ವ್ಯಾಮೋಹ ಬಿಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚೇಂಬರ್ ಉಪಾಧ್ಯಕ್ಷ, ಕಸಾಪ ನೂತನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ್ ಕಾಮತ್ ಮಾತನಾಡಿ, ಕನ್ನಡದ ಬೆಳವಣಿಗೆಗೆ ಸರ್ವರ ಸಹಕಾರ ಅಗತ್ಯ ಎಂದರು.
ನಿರ್ದೇಶಕ ಕಿರಿಯಮಾಡ ಅರುಣ್ ಪೂಣಚ್ಚ, ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕ, ಮಾಜಿ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಚೇಂಬರ್ ನಿರ್ದೇಶಕರಾದ ಗಣೇಶ್ ರೈ, ನಾಸೀರ್, ರಶ್ಮಿ ಬಾನು ಪ್ರಕಾಶ್, ಮಚ್ಚಮಾಡ ಅನಿತಾ, ನಗರದ ಉದ್ಯಮಿ ಲಕ್ಷಿö್ಮÃ ರೆಡ್ಡಿ, ಶ್ರೀನಿವಾಸ್, ಸತೀಶ್ ಸಿಂಗಿ, ನಂದಾ ಮುಂತಾದವರು ಉಪಸ್ಥಿತರಿದ್ದರು. ತೆಕ್ಕಡ ಕಾಶಿ ನಿರೂಪಿಸಿ, ಬಿ.ಎನ್. ಪ್ರಕಾಶ್ ಸ್ವಾಗತಿಸಿ, ವಂದಿಸಿದರು.