ಮಡಿಕೇರಿ, ಡಿ. ೧೬: ತಾ. ೧೨ ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ‘ಸಿಗ್ನೇರ‍್ಸ್ ಮಡಿಕೇರಿ’ ವತಿಯಿಂದ ಆಯೋಜಿಸಲಾಗಿದ್ದ ಕೊಡಗು ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ‘ಕೊಡಗು ನೈಟ್ಸ್, ಪೊನ್ನಂಪೇಟೆ’ ತಂಡ ಪ್ರಥಮ ಸ್ಥಾನ ಗಳಿಸಿದೆ. ‘ಟೀಮ್ ಸ್ಪಾರ್ಟನ್ಸ್’ ತಂಡ ಎರಡನೆಯ ಸ್ಥಾನ ಪಡೆದುಕೊಂಡಿದೆ. ಕೊಡಗು ನೈಟ್ಸ್ ಪೊನ್ನಂಪೇಟೆ ತಂಡದಲ್ಲಿ ರಾಬಿನ್, ದನುಶ್, ಶಯನ್, ವಿಕಾಸ್, ಜೋಯಲ್, ಜೋಜೋ, ರಮ್‌ಷದ್, ಅನಿಶ್, ಕವನ್, ಜಿಯಾ, ಸುಬ್ಬಯ್ಯ ಹಾಗೂ ಮಾಚಯ್ಯ ಅವರು ಭಾಗವಹಿಸಿದ್ದರು. ಕೋಚ್ ಆಗಿ ಜಾಯ್ಸ್ನ್ ಕಾರ್ಯ ನಿರ್ವಹಿಸಿದರು. ಟೀಮ್ ಸ್ಪಾರ್ಟ್ನ್ಸ್ ತಂಡದಲ್ಲಿ ಅಸ್ಸದ್, ಯೆಂಟಿನ್, ನಿಹಾಲ್, ಮುದ್ದಯ್ಯ ಕೆ.ಟಿ, ಕ್ಯಾಲ್ವಿನ್, ಕಾರ್ಯಪ್ಪ, ಅರ್ಪನ್, ಡಾ.ಕೈಲಾಶ್, ಟೆನ್‌ಸಿನ್, ಮುಷ್ತಾಕ್, ಕೋಡಿ ಹರ್ಷ, ಸೋನಮ್ ಹಾಗೂ ಅಂಕಿತ್ ಭಾಗವಹಿಸಿದ್ದರು. ಕೋಚ್ ಆಗಿ ಲೋಹಿತ್ ಚಂಗಪ್ಪ ಅವರು ಕಾರ್ಯನಿರ್ವಹಿಸಿದರು.