ಮಡಿಕೇರಿ, ಡಿ. ೧೩: ಇಲ್ಲಿಗೆ ಸಮೀಪದ ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಮತ್ತು ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ವನ್ನು ಏರ್ಪಡಿಸಲಾಗಿತ್ತು.
ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕೋವಿಡ್-೧೯ರ ನಿಯಮಾವಳಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಪಾಡಿ ಕೊಂಡು ಶಿಕ್ಷಕರನ್ನು ಬೀಳ್ಕೊಡ ಲಾಯಿತು. ಸಮಾರಂಭದ ಅಧ್ಯಕ್ಷತೆ ಯನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್. ಎಂ. ವೆಂಕಟೇಶ ಅವರು ವಹಿಸಿದ್ದರು. ನಿವೃತ್ತಿಯಾದ ದೈಹಿಕ ಶಿಕ್ಷಣ ಶಿಕ್ಷಕ ಡಿ.ವಿ. ಗಣೇಶ್, ವರ್ಗಾವಣೆಗೊಂಡ ಸಹ ಶಿಕ್ಷಕಿ ಹೆಚ್. ಜಿ. ಮೋಹನ ಕುಮಾರಿ ಮತ್ತು ಹೆಬ್ಬಾಲೆ ಕ್ಲಸ್ಟರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್. ಎಂ. ಗಿರೀಶ್ ಅವರನ್ನು ಶಾಲಾ ಶಿಕ್ಷಕ ವೃಂದದವರು ಮಕ್ಕಳ ಸಮ್ಮುಖದಲ್ಲಿ ನೆನಪಿನ ಕಾಣಿಕೆÀ ನೀಡಿ ಬೀಳ್ಕೊಡಲಾಯಿತು. ವೇದಿಕೆಯಲ್ಲಿ ಪತ್ರಕರ್ತ ಹೆಚ್.ಎಂ. ರಘು ಕೋಟಿ, ಸಿಬ್ಬಂದಿಗಳು, ವಿನುತಾ, ಮಂಜುಳಾ, ದಂಡಿಯಮ್ಮ, ಜಮುನಾ ಹಾಜರಿದ್ದರು.