ಮಡಿಕೇರಿ, ಡಿ. ೧೩: ಮಡಿಕೇರಿಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ಮಹಾಸಭೆ ನಗರದದಲ್ಲಿ ನಡೆಯಿತು.

ಶ್ರೀ ಚೌಡೇಶ್ವರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಭಾರತಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ೧೩ ಮಂದಿ ಹಾಗೂ ಜನಪ್ರಿಯ ನಟ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಸಭೆ ಶ್ರದ್ಧಾಂಜಲಿ ಅರ್ಪಿಸಿತು. ಪುಷ್ಪ ನಮನ ಸಲ್ಲಿಸಿದ ಪ್ರಮುಖರು ಮೃತರನ್ನು ನೆನೆದು ಕಂಬನಿ ಮಿಡಿದರು.

ಉಪಾಧ್ಯಕ್ಷೆ ಶಶಿಕಲಾ ಲೋಕೇಶ್, ಪದ್ಮಾ ಮೋಹನ್, ಕಾರ್ಯದರ್ಶಿ ಜಯಶ್ರೀ ಗವಿ, ನಿರ್ದೇಶಕರುಗಳಾದ ಇಂದ್ರ ಜಯರಾಂ, ಭಾಗ್ಯ ಪ್ರಕಾಶ್, ಸರೋಜ ರಾಜು, ನಂದಿನಿ ಗಣೇಶ್, ವಿದ್ಯಾ ದೇವರಾಜ್ ಲಲಿತಾ ಸುರೇಶ್ ಮನೋನ್ಮಣಿ. ಲಕ್ಷಿö್ಮÃ ಮೋಹನ್, ನಿರ್ಮಲಾ ದಿವಾಕರ್ ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.