ಸೋಮವಾರಪೇಟೆ, ಡಿ. ೧೩: ಮೀಸಲಾತಿ ಗೊಂದಲ ಹಾಗೂ ಅಭಿವೃದ್ಧಿ ಕಾರ್ಯ ನಿರ್ಲಕ್ಷö್ಯದಿಂದ ಬಹಿಷ್ಕರಿಸಲ್ಪಟ್ಟಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಅದರಂತೆ ನಾಮಪತ್ರ ಸಲ್ಲಿಕೆಯ ಪ್ರಥಮ ದಿನವಾದ ಇಂದು ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.
ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮಸ್ಥರು ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಕಳೆದ ಅನೇಕ ವರ್ಷಗಳಿಂದ ಕೂತಿ ಗ್ರಾಮದ ವಾರ್ಡ್ಗೆ ಎಸ್.ಟಿ. ಮೀಸಲಾತಿ ನಿಗದಿಯಾಗುತ್ತಿದೆ. ಗ್ರಾಮ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಂದಿ ವಾಸವಾಗಿಲ್ಲ. ಹೊರಭಾಗದಿಂದ ಅಭ್ಯರ್ಥಿಗಳನ್ನು ಹಾಕಬೇಕು. ಇದರೊಂದಿಗೆ ಗ್ರಾಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ ಎಂದು ಆರೋಪಿಸಿ ಮತದಾನದಿಂದ ದೂರ ಉಳಿದಿದ್ದರು.
ಇದೀಗ ಎಸ್.ಟಿ. ಮೀಸಲಾತಿಯನ್ನು ತೆರವುಗೊಳಿಸಿ ಕೂತಿ ಗ್ರಾಮದ ೨ ವಾರ್ಡ್ಗಳಿಗೆ ಸಂಬAಧಿಸಿದAತೆ ಹಿಂದುಳಿದ ವರ್ಗ ಅ. ಹಾಗೂ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿದ್ದು, ಈ ಬಾರಿ ಗ್ರಾಮಸ್ಥರು ಮತದಾನದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ತಾ. ೧೩ ರಿಂದ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಪ್ರಥಮ ದಿನದಂದು ಯಾರೂ ಸಹ ನಾಮಪತ್ರ ಸಲ್ಲಿಸಿಲ್ಲ. ಉಮೇದುವಾರಿಕೆ ಸಲ್ಲಿಸಲು ತಾ. ೧೭ ಕೊನೆಯ ದಿನವಾಗಿದೆ. ೧೮ ರಂದು ಪರಿಶೀಲನೆ, ೨೦ ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ, ೨೭ ರಂದು ಮತದಾನ, ಅವಶ್ಯವಿದ್ದಲ್ಲಿ ತಾ. ೨೯ ರಂದು ಮರು ಮತದಾನ, ತಾ. ೩೦ ರಂದು ಮತ ಎಣಿಕೆ ನಡೆಸಲು ಆಯೋಗ ತೀರ್ಮಾನಿಸಿದೆ. ಕೂತಿ ಗ್ರಾಮದ ಚುನಾವಣಾಧಿಕಾರಿಯನ್ನಾಗಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಹೇಮಂತ್‌ಕುಮಾರ್ ಹಾಗೂ ಬಿಇಓ ಕಚೇರಿಯ ರಾಜೇಶ್ ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನಿಯೋಜಿಸಿದೆ.
ಚುನಾವಣೆ ಸಂಬAಧ ನಾಳೆ ಸಭೆ: ಎರಡು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ತಾ. ೧೫ ರಂದು (ನಾಳೆ) ಕೂತಿ ಗ್ರಾಮದಲ್ಲಿ ಗ್ರಾಮಸ್ಥರ ಸಭೆ ನಡೆಯಲಿದೆ. ಸಭೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸುವ ಅಥವಾ ಅವಿರೋಧವಾಗಿ ಆಯ್ಕೆ ಮಾಡುವ ಸಂಬAಧ ಚರ್ಚೆ ನಡೆಯಲಿದ್ದು, ಒಮ್ಮತದ ತೀರ್ಮಾನದಂತೆ ಮುಂದುವರೆಯು ವುದಾಗಿ ಗ್ರಾಮದ ಪ್ರಮುಖರು ತಿಳಿಸಿದ್ದಾರೆ.