ಮಡಿಕೇರಿ, ಡಿ. ೧೩: ಜಿಲ್ಲೆಯಲ್ಲಿ ಏರ್ಪಟ್ಟಿರುವ ಸೀಮೆಎಣ್ಣೆ ಪೂರೈಕೆ ಸಮಸ್ಯೆ ಹಾಗೂ ಕಂದಾಯ ಇಲಾಖೆಯಲ್ಲಿ ರೈತರಿಗೆ ಸಮರ್ಪಕವಾಗಿ ದೊರೆಯದ ದಾಖಲಾತಿ ತೊಂದರೆಗಳನ್ನು ಪರಿಹರಿಸುವ ಸಂಬAಧ ಸರಕಾರದ ಗಮನಸೆಳೆಯಲು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೫೪ನೇ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಯೂನಿಯನ್‌ನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಅಧ್ಯಕ್ಷ ಅಪ್ಪಚಟ್ಟೋಳಂಡ ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು.

ಜಿಲ್ಲೆಯ ರೈತರಿಗೆ ಸೀಮೆಎಣ್ಣೆಯ ಅಗತ್ಯತೆ ಹೆಚ್ಚಿದೆ. ಆದರೆ, ಸಮರ್ಪಕವಾಗಿ ತೈಲ ಪೂರೈಕೆಯಾಗುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದ್ದು, ಇದನ್ನು ಸರಿಪಡಿಸಬೇಕಾಗಿದೆ ಎಂದು ಸದಸ್ಯರು ತಿಳಿಸಿದರು. ಜೊತೆಗೆ ಕಂದಾಯ ಇಲಾಖೆಯಲ್ಲಿ ಪೌತಿ ದಾಖಲಾತಿ ಸೇರಿದಂತೆ ಇನ್ನಿತರ ಕೃಷಿಭೂಮಿಗೆ ಸಂಬAಧಿಸಿದ ದಾಖಲೆ ಪಡೆಯಲು ರೈತರು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ವ್ಯಾಪಕ ಭ್ರಷ್ಟಾಚಾರ ಕಂದಾಯ ಇಲಾಖೆಯಲ್ಲಿ ನಡೆಯುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಯೂನಿಯನ್ ಮುಂದಾಗಬೇಕೆAದು ಸದಸ್ಯರುಗಳು ಸಲಹೆ ನೀಡಿದರು.

ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಮನುಮುತ್ತಪ್ಪ, ಇವೆರಡು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಂದಾಯ ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಒಗ್ಗೂಡಿ ವೇದಿಕೆ ಸೃಷ್ಟಿಸಿ ಹೋರಾಟದ ಮೂಲಕ ನ್ಯಾಯಕಂಡುಕೊಳ್ಳುವ ಅನಿವಾರ್ಯತೆ ಇದೆ. ಈ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ನಿರ್ದೇಶಕ ರವಿ ಬಸಪ್ಪ ಮಾತನಾಡಿ, ಸೀಮೆಎಣ್ಣೆ ದರ ಹೆಚ್ಚಾದ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ. ಜಿಲ್ಲಾಧಿಕಾರಿ ದರ ನಿಗದಿ ಸಂಬAಧ ಕ್ರಮಕೈಗೊಳ್ಳಬೇಕಾಗಿದೆ ಎಂದರು.

ಹಿರಿಯ ಸಹಕಾರಿ ಎಂ.ಬಿ. ದೇವಯ್ಯ ಮಾತನಾಡಿ, ಸಹಕಾರ ಸಂಘಗಳ ಶಾಖೆಯಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಸಮರ್ಪಕವಾಗಿ ಪಡಿತರ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಯೂನಿಯನ್ ಗಮನಹರಿಸಬೇಕೆಂದು ಸಲಹೆ ನೀಡಿದರು. ಚೆಟ್ಟಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಕೂಡ ಆಹಾರ ಇಲಾಖೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಜೊತೆಗೆ ಬಡ್ಡಿ ಸಹಾಯಧನ ವಿತರಣೆಗೆ ಬಾಕಿ ಇದೆ. ಇದನ್ನು ಸರಿಪಡಿಸಬೇಕು ಎಂದು ಕೋರಿದರು.

ಇನ್ನೂ ಆನೇಕ ಸಹಕಾರ ಸಂಘದ ಪ್ರಮುಖರು ಸಂಘದ ಅಭಿವೃದ್ಧಿ ಸಂಬAಧ ಸಲಹೆ ನೀಡಿದರು. ಹೆಚ್ಚಾಗಿ ತರಬೇತಿ ನಡೆಸುವಂತೆ ಮನವಿ ಮಾಡಿದರು.

ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಅಕಾಲಿಕ ಮಳೆಯಿಂದ ಬೆಳೆಗಾರರು ಸಂಕಷ್ಟದಲ್ಲಿದ್ದು, ಸಾಲಮನ್ನಾದ ಬಗ್ಗೆ ಸರಕಾರಕ್ಕೆ ಒತ್ತಡ ಹಾಕಲಾಗಿದೆ. ಕೊರೊನಾ ಹಿನ್ನೆಲೆ ಸಂಘದ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲದೆ, ಜಿಲ್ಲೆಯ ಹಲವು ಸಹಕಾರ ಸಂಘಗಳು ಶತಮಾನೋತ್ಸವ ಸಂಭ್ರಮದಲ್ಲಿದ್ದು, ವಿಜೃಂಭಣೆಯಿAದ ಆಚರಿಸಬೇಕೆಂದು ಕರೆ ನೀಡಿದ ಅವರು, ಈ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ಕನಿಷ್ಟ ರೂ.೧ ಲಕ್ಷ ಅನುದಾನ ಮೀಸಲಿಡಬೇಕು ಎಂದರು. ಇದಕ್ಕೂ ಮೊದಲು ಕಳೆದ ಮಹಾಸಭೆಯ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಪಟ್ಟಡ ಸಿ. ಮನು ರಾಮಚಂದ್ರ, ನಿರ್ದೇಶಕರಾದ ಮುಕ್ಕಾಟೀರ ಪ್ರೇಮ ಸೋಮಯ್ಯ, ಬಿದ್ದಾಟಂಡ ಎ ರಮೇಶ್ ಚಂಗಪ್ಪ, ನಂದಿನೆರವAಡ ರವಿ ಬಸಪ್ಪ, ಪಾಲಚಂಡ ಸಿ ಅಚ್ಚಯ್ಯ, ಕೊಡಪಾಲು ಗಣಪತಿ, ಕೋಡೀರ ತಮ್ಮಯ್ಯ, ಚಿಮ್ಮಣಮಾಡ ಕೃಷ್ಣ ಗಣಪತಿ, ವಾಂಚೀರ ಅಜಯ್ ಕುಮಾರ್, ಪೆಮ್ಮಂಡ ಭರತ್, ಕೊಂಗAಡ ಮುದ್ದಯ್ಯ, ನಾಪಂಡ ಉಮೇಶ್, ಪಂಜಿಪಳ್ಳ ಯತೀಶ್, ಕನ್ನಂಡ ಸಂಪತ್, ಸಂಘದ ಕಾಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ವ್ಯವಸ್ಥಾಪಕಿ ಮಂಜುಳಾ ಉಪಸ್ಥಿತರಿದ್ದರು.