ಮಡಿಕೇರಿ, ಡಿ. ೧೩: ಕೋವಿಡ್‌ಗೆ ತುತ್ತಾಗಿ ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಘೋಷಿಸಿದ್ದ ಪರಿಹಾರ ಹಣಕ್ಕೆ ಸಂಬAಧಿಸಿದAತೆ ಈಗಾಗಲೇ ಕೊಡಗು ಜಿಲ್ಲೆಗೆ ರೂ. ೧೧೧ ಲಕ್ಷ ಬಿಡುಗಡೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಬಳಿಕ ಅವುಗಳ ಹಂಚಿಕೆ ನಡೆಯಲಿದೆ.

ಕೋವಿಡ್ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಕೇಂದ್ರ ಸರಕಾರದಿಂದ ೫೦ ಸಾವಿರ, ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ೧ ಲಕ್ಷ ಪರಿಹಾರ ಧನ ನೀಡುವುದಾಗಿ ಸರಕಾರ ಘೋಷಿಸಿತ್ತು. ಕೊಡಗು ಜಿಲ್ಲೆಯಲ್ಲಿ ನವೆಂಬರ್ ಅಂತ್ಯದವರೆಗೆ ಸುಮಾರು ೪೩೧ ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಮೃತ ಕುಟುಂಬಗಳಿಗೆ ಪರಿಹಾರ ಒದಗಿಸುವ ಸಂಬAಧ ಮೊದಲ ಹಂತದಲ್ಲಿ ೩೩೧ ಅರ್ಜಿಗಳನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದರಲ್ಲಿ ೨೭೪ ಅರ್ಜಿಗಳು ಅನುಮೋದಿಸಲ್ಪಟ್ಟಿವೆ. ೨೮ ಅರ್ಜಿಗಳು ಬೇರೆ ಜಿಲ್ಲೆಯವರಾಗಿದ್ದು, ಅವುಗಳನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಉಳಿದ ೨೯ ಅರ್ಜಿಗಳಿಗೆ ಸಂಬAಧಿಸಿದAತೆ ತಾಂತ್ರಿಕ ಸಮಸ್ಯೆಗಳಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಇವುಗಳ ಪೈಕಿ ನಾಲ್ಕೆöÊದು ಪ್ರಕರಣಗಳಲ್ಲಿ ಮೃತರ ವಾರಿಸುದಾರರು ಇಲ್ಲವಾಗಿದ್ದು, ಅಂತವುಗಳ ಬಗ್ಗೆಯೂ ಪರಿಶೀಲನೆ ಮುಂದುವರಿದೆ. ಎರಡನೇ ಹಂತದಲ್ಲಿ ೧೦೦ ಅರ್ಜಿಗಳನ್ನು ಕಳುಹಿಸಲಾಗಿದ್ದು, ಅವುಗಳ ಬಗ್ಗೆ ಪೋರ್ಟಲ್‌ನಲ್ಲಿ ಮಾಹಿತಿ ಬರಬೇಕಿದೆ. ಪೋರ್ಟಲ್‌ನಲ್ಲಿ ಮಾಹಿತಿ ಬರಬೇಕೆಂದರೆ ಸಂಬAಧಿಸಿದವರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದ್ದು, ಇದನ್ನು ಕೂಡ ಕೈಗೊಳ್ಳಲಾಗಿದೆ.

ಪ್ರಸ್ತುತ ೧೧೧ ಬಿಪಿಎಲ್ ಕುಟುಂಬಗಳಿಗೆ ತಲಾ ೧ ಲಕ್ಷದಂತೆ ೧೧೧ ಲಕ್ಷ ಬಿಡುಗಡೆಯಾಗಿದೆ. ಸಮರ್ಪಕವಾಗಿರುವ ಉಳಿದ ಅರ್ಜಿಗಳಿಗೂ ಮುಂದಿನ ದಿನಗಳಲ್ಲಿ ಪರಿಹಾರಧನ ಬಿಡುಗಡೆಯಾಗಲಿದ್ದು, ತಾಂತ್ರಿಕ ಸಮಸ್ಯೆಗಳಿರುವ ಅರ್ಜಿಗಳ ಸಂಬAಧ ಸಮಸ್ಯೆ ಪರಿಹಾರಗೊಂಡ ಬಳಿಕ ಅವುಗಳೂ ಕೂಡ ಅನುಮೋದಿಸಲ್ಪಡುತ್ತವೆ. ರಾಜ್ಯ ಸರಕಾರದ ಪರಿಹಾರಧನ ಜಿಲ್ಲಾಡಳಿತದ ಮೂಲಕ ಸಂಬAಧಿಸಿದವರ ಖಾತೆಗೆ ಬರಲಿದ್ದು, ಕೇಂದ್ರ ಸರಕಾರದ ಪರಿಹಾರ ನೇರವಾಗಿ ಫಲಾನುಭವಿಗಳ ಖಾತೆಗೆ ಬರಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.