ಮಡಿಕೇರಿ, ಡಿ. ೧೩: ಕೊಡಗಿನ ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನಪರಿಷತ್‌ಗೆ ನಡೆದಿರುವ ಚುನಾವಣೆಯ ಫಲಿತಾಂಶ ತಾ. ೧೪ರಂದು (ಇಂದು) ಹೊರಬೀಳಲಿದ್ದು, ನೂತನ ಎಂಎಲ್‌ಸಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ತಾ. ೧೦ರಂದು ವಿಧಾನಪರಿಷತ್ ಸದಸ್ಯ ಸ್ಥಾನದ ಚುನಾವಣೆ ನಡೆದಿದ್ದು, ಈ ಬಾರಿಯ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಿನ ನೇರ ಸ್ಪರ್ಧೆಯಿಂದಾಗಿ ಭಾರೀ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಎಂ.ಪಿ. ಸುಜಾ ಕುಶಾಲಪ್ಪ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಡಾ. ಮಂತರ್‌ಗೌಡ ಅವರ ನಡುವಿನ ನೇರ ಹಣಾಹಣಿ ಸಾಕಷ್ಟು ಚರ್ಚೆಗಳಿಗೂ ಎಡೆಮಾಡಿದೆ. ಜಿಲ್ಲೆಯ ೧೩೨೯ ಮತದಾರರ ಪೈಕಿ ೧೩೨೫ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇರುವುದರಿಂದ ಈ

ಬಾರಿ ಎರಡನೆಯ ಪ್ರಾಶಸ್ತö್ಯ

ಮತಕ್ಕೆ ಪ್ರಾಧಾನ್ಯತೆ ಇಲ್ಲ. ಹೆಚ್ಚು

ಮತ ಪಡೆಯುವ ಅಭ್ಯರ್ಥಿಗೆ

ಮೇಲ್ಮನೆ ಪ್ರವೇಶಕ್ಕೆ ರಹದಾರಿ ಸುಗಮವಾಗಲಿದೆ.

(ಮೊದಲ ಪುಟದಿಂದ)

ಮತ ಎಣಿಕೆಗೆ ವ್ಯವಸ್ಥೆ

ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಾ. ಬಿ.ಸಿ. ಸತೀಶ ನೇತೃತ್ವದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮತ ಎಣಿಕೆ ಸಂಬAಧ ೬ ಟೇಬಲ್ ಅಳವಡಿಸಲಾಗಿದ್ದು, ಒಂದು ಟೇಬಲ್‌ನಲ್ಲಿ ೨೦೦ ಮತ ಎಣಿಕೆಯಾಗಲಿದೆ. ಒಂದೇ ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಸುತ್ತಿನ ಮತ ಎಣಿಕೆ ಬಳಿಕ ಉಳಿದ ಮತವನ್ನು ಎಣಿಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೋಮವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ದತೆ ಬಗ್ಗೆ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ತಹಶೀಲ್ದಾರ್ ಮಹೇಶ್, ಚುನಾವಣೆ ಶಾಖೆಯ ಶಿರಸ್ತೆದಾರ್ ಪ್ರವೀಣ್ ಕುಮಾರ್ ಇತರರು ಇದ್ದರು.