ಮಡಿಕೇರಿ, ಡಿ. ೧೩: ಸೇನಾ ಜಿಲ್ಲೆ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರದಲ್ಲಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯಕ್ಕೆ ನೌಕಾದಳದ ಮೂಲಕ ನೀಡಲ್ಪಟ್ಟಿರುವ ವಿವಿಧ ಆಕರ್ಷಣೀಯ ಪರಿಕರಗಳ ಮಾದರಿಗಳ ಉದ್ಘಾಟನಾ ಸಮಾರಂಭ ಇಂದು ದೇಶದ ನೌಕಾದಳದ ವೈಸ್ ಅಡ್ಮಿರಲ್ ಬಿಸ್ವಜಿತ್‌ದಾಸ್ ಗುಪ್ತ ಅವರ ಪಾಲ್ಗೊಳ್ಳುವಿಕೆಯೊಂದಿಗೆ ಶಿಸ್ತುಬದ್ಧವಾಗಿ ಜರುಗಿತು. ವಸ್ತು ಸಂಗ್ರಹಾಲಯದಲ್ಲಿ ಈ ಹಿಂದೆ ಭೂಸೇನೆ, ವಾಯುಸೇನೆಗೆ ಸಂಬAಧಿಸಿದ ವಿವಿಧ ಮಾದರಿಗಳು ಅಳವಡಿಸಲ್ಪಟ್ಟಿದ್ದು, ಇದೀಗ ನೌಕಾದಳದ ಯುದ್ಧನೌಕೆ ಸೇರಿದಂತೆ ಇನ್ನಿತರ ಕೆಲವು ಮಾದರಿಗಳ ಅನುಷ್ಟಾನದೊಂದಿಗೆ ಭಾರತೀಯ ಸೇನೆಗೆ ಸಂಬAಧಿಸಿದAತೆ ಸಾರ್ವಜನಿಕರನ್ನು ಉತ್ತೇಜಿಸುವ ರೀತಿಯಲ್ಲಿ ಮತ್ತಷ್ಟು ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದೆ.
ಉದ್ಘಾಟನೆ ನೆರವೇರಿಸಿದ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತ ಅವರು ಈ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ, ಇದರ ಹಿಂದಿರುವ ಪ್ರಮುಖರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೆ ಕೇಂದ್ರದ ಕುರಿತಾಗಿಯೂ ಮೆಚ್ಚುಗೆಯ ನುಡಿಗಳನ್ನಾಡಿದರು.
ಅಧಿಕಾರಿಯ ಮಾತುಗಳಲ್ಲಿ...
ಭವಿಷ್ಯದಲ್ಲಿ ನೌಕಾಪಡೆಯ ೩೯ ಹಡಗುಗಳು ಭಾರತದಲ್ಲೇ ನಿರ್ಮಾಣ
ಭವಿಷ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೌಕಾಪಡೆಯ ೪೧ ಹಡಗುಗಳಲ್ಲಿ ಒಟ್ಟು ೩೯ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ೧೯೬೦ರಲ್ಲಿಯೇ ನವದೆಹಲಿಯಲ್ಲಿ ಭಾರತದ ಮೊದಲ ಯುದ್ಧಹಡಗನ್ನು ತಯಾರಿಸಲಾಗಿತ್ತು. ಅಂದೇ ಭಾರತ ಆತ್ಮನಿರ್ಭರವಾಗಿತ್ತು.
(ಮೊದಲ ಪುಟದಿಂದ) (ಆ್ಯಂಟಿಏರ್‌ಕ್ರಾಫ್ಟ್) ಈ ಗನ್, ಒಂದು ನಿಮಿಷಕ್ಕೆ ೨,೦೦೦ ರೌಂಡ್ಸ್ನ ಸಾಮರ್ಥ್ಯ ಹೊಂದಿದೆ. ಸುಮಾರು ೩೦ ವರ್ಷಗಳ ಕಾಲ ಇದರ ಬಳಕೆಯಾಗುತ್ತಿತ್ತಾದರೂ ಇದೀಗ ಇದರ ಬದಲು ನೂತನ ಎ.ಕೆ-೬೩೦ ಗನ್ ಬಳಕೆಯಲ್ಲಿದೆ. ಇದರೊಂದಿಗೆ ಕೇಂದ್ರದೊಳಗೆ ಐ.ಎನ್.ಸಿ. ಕುಕ್ರಿ - ಪಂಡೋಬಿ ಮತ್ತಿತರ ನೌಕಾದಳಕ್ಕೆ ಸಂಬAಧಿಸಿದ ಮಾದರಿಗಳು ಅಳವಡಿಸಲ್ಪಟ್ಟಿವೆ.ಮೂಲಕ ಆಗುತ್ತಿದೆ. ಜನರಲ್ ತಿಮ್ಮಯ್ಯ-ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಫೋರಮ್‌ನ ಸದಸ್ಯರು ಜಿಲ್ಲಾಡಳಿತದೊಂದಿಗೆ ಅತ್ತುö್ಯತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಈ ಸಂಗ್ರಹಾಲಯ ಇಂದು ಆಕರ್ಷಣೀಯ ಕೇಂದ್ರವಾಗಿ ತಲೆಯೆತ್ತಿದೆ ಎಂದರು. ಇದೀಗ ಸಂಗ್ರಹಾಲಯಕ್ಕೆ ನೌಕಾಪಡೆಯ ಮಾದರಿ ಹಡಗು ಕೂಡ ಬಂದು ಸೇರಿದೆ. ಇದು ನೌಕಾಪಡೆಯತ್ತಲೂ ಯುವ ಜನತೆಯನ್ನು ಆಕರ್ಷಿಸುವ ಪ್ರಯತ್ನವಾಗಿದೆ ಎಂದು ಅವರು ನುಡಿದರು.
ನೌಕಾಪಡೆಯೆಂಬುದು ಅನ್ಯಲೋಕ
ನೌಕಾಸೇನೆ ಎಂಬುದು ಒಂದು ರೀತಿಯಲ್ಲಿ ಅನ್ಯಲೋಕವಾಗಿದೆ. ನೌಕಾಪಡೆಯವರು ಸದ್ದಿಲ್ಲದೇ ಕಾರ್ಯ ಮಾಡುತ್ತಾರೆ. ಸಾರ್ವಜನಿಕ ರಹಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಕಾರಣ ನಮ್ಮ ಸೇವೆ ಅಷ್ಟರ ಮಟ್ಟಿಗೆ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಗುರುತಿಸಲ್ಪಡುವುದಿಲ್ಲ. ಆದರೆ ಅಂತರರಾಷ್ಟಿçÃಯ ಮಟ್ಟದ ವ್ಯಾಪಾರ-ವಹಿವಾಟು ಸಂಬAಧ ನಡೆಯುವ ಹಡಗು ಸಂಚಾರ ಸುಸೂತ್ರವಾಗಿ ನಡೆಯಬೇಕಾದರೆ ಹಾಗೂ ಭದ್ರತೆಯ ಹಿತದೃಷ್ಟಿಯಲ್ಲೂ ನೌಕಾಪಡೆಯ ಪಾತ್ರ ಅತ್ಯಮೂಲ್ಯವಾಗಿದೆ ಎಂದರು. ತಂತ್ರಜ್ಞಾನ ಆಸಕ್ತಿಯುಳ್ಳ ಯುವಪೀಳಿಗೆಗೆ ನೌಕಾಪಡೆಯಲ್ಲಿ ಹೆಚ್ಚಿನ ಅವಕಾಶವಿರುವುದಾಗಿ ತಿಳಿಸಿದರು.
ರಾಷ್ಟçದಲ್ಲಿ ೪ ಪಬ್ಲಿಕ್ ಸೆಕ್ಟರ್ ಶಿಪ್‌ಯಾರ್ಡ್ಗಳಿವೆ. ಮುಂಬೈ, ಕಲ್ಕತ್ತ, ಗೋವಾ ಹಾಗೂ ವಿಶಾಖಪಟ್ಟಣಗಳಲ್ಲಿನ ಈ ಶಿಪ್‌ಯಾರ್ಡ್ಗಳಲ್ಲಿ ವಿಶೇಷವಾಗಿ ನೌಕಾಪಡೆಗೆಂದೇ ಹಡಗುಗಳನ್ನು ತಯಾರಿಸಲಾಗುತ್ತದೆ. ಇದಲ್ಲದೆ ಮತ್ತೊಂದು ಶಿಪ್‌ಯಾರ್ಡ್ ಕೊಚ್ಚಿನ್‌ನಲ್ಲಿದೆ. ಇಲ್ಲಿಯೂ ಕೂಡ ನೌಕಾಪಡೆಯ ಬಳಕೆಗೆ ಕೆಲವು ಹಡಗುಗಳನ್ನು ತಯಾರಿಸಲಾಗುತ್ತದೆ ಎಂದರು.
ನೌಕಾಪಡೆಯ ಮಾದರಿ ಹಡಗನ್ನು ಸಂಗ್ರಹಾಲಯಕ್ಕೆ ತರಲು ಜಿಲ್ಲೆಯವರಾದ ರಿಯರ್ ಅಡ್ಮಿರಲ್ ಐಚೆಟ್ಟೀರ ಬಿ. ಉತ್ತಯ್ಯ ಅವರು ವಿಶೇಷ ಆಸಕ್ತಿ ತೋರಿದ್ದರಿಂದ ಅತ್ಯಂತ ಕಡಿಮೆ ಸಮಯದಲ್ಲಿ ಇದರ ಅನಾವರಣ ಕಾರ್ಯ ನಡೆಯಿತು ಎಂದು ಉತ್ತಯ್ಯ ಅವರ ಕಾರ್ಯವನ್ನು ಶ್ಲಾಘಿಸಿದರು.
ಮೌನಾಚರಣೆ
ಇತ್ತೀಚೆಗಷ್ಟೆ ಹೆಲಿಕಾಪ್ಟರ್ ದುರಂತದಲ್ಲಿ ಅಗಲಿದ ದೇಶದ ಮೊದಲ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳನ್ನು ಸ್ಮರಿಸುತ್ತಾ ಕಾರ್ಯಕ್ರಮಕ್ಕೂ ಮುನ್ನ ೧ ನಿಮಿಷಗಳ ಕಾಲ ಮೌನಾಚರಣೆ ನಡೆಯಿತು. ಇದಕ್ಕೂ ಮೊದಲು ಸಂಗ್ರಹಾಲಯದಲ್ಲಿನ ಯುದ್ಧ ಸ್ಮಾರಕಕ್ಕೆ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತ ಅವರು ಪುಷ್ಪ ನಮನ ಸಲ್ಲಿಸಿದರು.
ದೇವಾಟ್‌ಪರಂಬು ನರಮೇಧ ನೆನಪು
ಕಾರ್ಯಕ್ರಮಕ್ಕೆ ಆಗಮಿಸಿದ್ದ ಲೆಫ್ಟಿನೆಂಟ್ ಜನರಲ್(ನಿವೃತ್ತ) ಪಿ.ಸಿ ತಿಮ್ಮಯ್ಯ ಅವರು ಮಾತನಾಡಿ ಡಿ.೧೨ ರಂದು ೨೩೬ ವರ್ಷಗಳ ಹಿಂದೆ ಕೊಡವ ಜನಾಂಗದ ಸಹಸ್ರಾರು ಮಂದಿ ಹುತಾತ್ಮರಾದದನ್ನು ನೆನಪಿಸಿಕೊಂಡರು. ಜನಾಂಗದವರು ಸೇನೆಯಲ್ಲಿ ನೀಡಿರುವ ಕೊಡುಗೆಯ ನೆನಪಿಗಾಗಿ ಒಡಿಕತ್ತಿಯನ್ನು ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತ ಅವರಿಗೆ ಉಡುಗೊರೆಯಾಗಿ ನೀಡಿದರು. ಫೋರಮ್ ಸಂಚಾಲಕ ಕೆ.ಸಿ ಸುಬ್ಬಯ್ಯ ಅವರು ಐಚೆಟ್ಟೀರ ಉತ್ತಯ ಅವರಿಗೆ ಒಡಿಕತ್ತಿಯನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರು ನಾಡಗೀತೆ ಹಾಡಿದರು. ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರು ಅತಿಥಿಗಳನ್ನು ಸ್ವಾಗತಿಸಿದರು. ಫೋರಮ್‌ನ ಸಂಚಾಲಕ ನಿವೃತ್ತ ಮೇಜರ್ ಬಿ.ಸಿ ನಂಜಪ್ಪ ನಿರೂಪಿಸಿದರು. ತಿಮ್ಮಯ್ಯ ಸಂಗ್ರಹಾಲಯದ ಇತಿಹಾಸವನ್ನು ಫೋರಮ್‌ನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ ಸುಬ್ಬಯ್ಯ ಅವರು ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಕೆ.ಟಿ ದರ್ಶನ್ ಅವರು ವಂದಿಸಿದರು. ವೇದಿಕೆಯಲ್ಲಿ ಮೇಜರ್ ಜನರಲ್ (ನಿವೃತ್ತ) ಕೆ.ಪಿ ನಂಜಪ್ಪ, ರಿಯರ್ ಅಡ್ಮಿರಲ್ ಐಚೆಟ್ಟೀರ ಉತ್ತಯ್ಯ, ವೈಸ್ ಅಡ್ಮಿರಲ್ ಅವರ ಪತ್ನಿ ರೂಪ ದಾಸ್‌ಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂದರ್ಭ ಕೂಡಿಗೆ ಸೈನಿಕ ಶಾಲಾ ವಿದ್ಯಾರ್ಥಿಗಳು ಸಾರೇಜಹಾಸೆ ಅಚ್ಚಾ ದೇಶಭಕ್ತಿ ಗೀತೆ ಹಾಡಿದರು. ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಮುಖ್ಯಸ್ಥ ಮೇಜರ್ ರಾಘವ್ ನೇತೃತ್ವದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದರು.
ಸಬ್‌ಮೆರೀನ್ ಉದ್ಘಾಟನೆ
ಸಂಗ್ರಹಾಲಯದ ಮತ್ತೊಂದು ನೂತನ ಆಕರ್ಷಣೆಯಾಗಿರುವ ಸುಂಧುಗೋಷ್ ಕ್ಲಾಸ್ ಸಬ್‌ಮೆರೀನ್ ಮಾದರಿಯನ್ನು ವಿಶಾಖಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಯರ್ ಅಡ್ಮಿರಲ್ ಉತ್ತಯ್ಯ ಹಾಗೂ ನಿವೃತ್ತ ಮೇಜರ್ ಜನರಲ್ ಕೆ.ಪಿ ನಂಜಪ್ಪ ಅವರು ಅನಾವರಣಗೊಳಿಸಿದರು. ಈ ಸಬ್‌ಮೆರೀನ್‌ನ ನೈಜ ಅಳತೆ (ಉದ್ದ ೭೨.೬ ಮೀಟರ್, ಅಗಲ ೯.೯ ಮೀಟರ್). ೩೦೦ ಮೀಟರ್‌ನಷ್ಟು ಆಳಕ್ಕೆ ಮುಳುಗಬಲ್ಲ ಈ ಸಬ್‌ಮೆರಿನ್ ೫೩ ಮಂದಿಯ ಸಾಮರ್ಥ್ಯ ಹೊಂದಿದೆ. -ಜಿ.ಆರ್. ಪ್ರಜ್ವಲ್
ಸದ್ಯದಲ್ಲಿ ಸಲಹಾ ಸಮಿತಿ
ಸಂಗ್ರಹಾಲಯದ ನಿರ್ವಹಣೆಯ ಸಲಹಾ ಸಮಿತಿಗೆ ಫೋರಮ್‌ನ ಸದಸ್ಯರನ್ನು ಕಡೆಗಣಿಸಲಾಗಿದ್ದು, ಸೇರಿಸುವ ಕಾರ್ಯವಾಗಬೇಕೆಂದು ಫೋರಮ್‌ನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ ಸುಬ್ಬಯ್ಯ ಅವರು ತಮ್ಮ ಭಾಷಣದಲ್ಲಿ ಜಿಲ್ಲಾಡಳಿತದ ಗಮನ ಸೆಳೆದರು. ವಂದನಾರ್ಪಣೆ ಸಂದರ್ಭ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಕೆ.ಟಿ ದರ್ಶನ್ ಅವರು ಸದ್ಯದಲ್ಲಿಯೇ ಸಲಹಾ ಸಮಿತಿ ರಚಿಸುವುದಾಗಿ, ಇದರಲ್ಲಿ ಫೋರಮ್‌ನ ಸದಸ್ಯರು, ಮಾಜಿ ಸೈನಿಕರು ಸೇರಿದಂತೆ ತಿಮ್ಮಯ್ಯ ಅವರ ಕುಟುಂಬದವರನ್ನೂ ಸೇರಿಸಲಾಗುವುದಾಗಿ ಹೇಳಿದರು.