ಮಡಿಕೇರಿ, ಡಿ. ೧೧: ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಇರುವ ಕಾಂತೂರು-ಮೂರ್ನಾಡು ಪಟ್ಟಣ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಜನಸಂಖ್ಯೆ ಏರಿಕೆಯೊಂದಿಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಜನರಿಗೆ ಓಡಾಡಲು, ವಾಹನಗಳ ಸಂಚಾರಕ್ಕೆ ಅಗತ್ಯವೆನಿಸಿದ ರಸ್ತೆಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ., ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ತರವೆನಿಸಿದೆ.
ಮೂರ್ನಾಡು ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮೇಕೇರಿಯಿಂದಲೇ ತೀರಾ ಹಾಳಾಗಿದೆ. ಮೂರ್ನಾಡು ಪಟ್ಟಣದೊಳಗೂ ಅಲ್ಲಲ್ಲಿ ಗುಂಡಿಗಳಿAದ ಕೂಡಿದೆ. ಪ್ರತಿನಿತ್ಯ ನಾರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಗುಂಡಿಗಳಿAದಾಗಿ ಸಣ್ಣ ಪುಟ್ಟ ಅವಘಡಗಳು, ವಾಹನ ದಟ್ಟಣೆಯಾಗುವದು ಸಾಮಾನ್ಯವಾಗಿಬಿಟ್ಟಿದೆ.
ಇದರೊಂದಿಗೆ ಕಾಂತೂರು - ಐಕೊಳ, ಕಬಡಕೇರಿ - ನಾಪೋಕ್ಲು ರಸ್ತೆ, ಬಲಮುರಿ ರಸ್ತೆಗಳು ತೀರಾ ಹದಗೆಟ್ಟಿವೆ. ಈ ರಸ್ತೆಗಳಲ್ಲಿ ಸಂಚರಿಸುವದು ತ್ರಾಸದಾಯಕವೇ ಸರಿ. ಹಿರಿಯರು, ಅನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ಯುವದು ಒಂದು ಸಾಹಸವೇ ಸರಿ..!
ಪ್ರತಿಭಟನೆ ಎಚ್ಚರಿಕೆ
ರಸ್ತೆ ದುರವಸ್ತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದವರು, ತೈಲ ಬೆಲೆ, ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಆಟೋ ಚಾಲಿಸುವದು ಕಷ್ಟಕರವಾಗಿದೆ. ರೋಗಿಗಳನ್ನು ಕರೆದುಕೊಂಡು ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯವರು ಇತ್ತ ಗಮನಹರಿಸಿ, ಒಂದು ತಿಂಗಳೊಳಗಡೆ ರಸ್ತೆ ಸರಿಪಡಿಸದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ.