ನಾಪೋಕ್ಲು, ಡಿ. ೧೧: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಮೌಲಾನ ಶಾಫಿ ಶಹದಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಸಮೀಪದ ಕೊಟ್ಟಮುಡಿ ಮರ್ಕಝ್ ಹಿದಾಯದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ನಿಂದ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಕೊಡಗು ಜಿಲ್ಲಾ ಅಧ್ಯಕ್ಷ ಚಿನ್ನೂರ್ ತಂಗಳ್, ಕಾರ್ಯದರ್ಶಿ ಅಶ್ರಫ ಅಹಸಿನಿ, ಕೊಟ್ಟಮುಡಿ ಮರ್ಕಝ್ ಹಿದಾಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಎಸ್ಎಸ್ಎಫ್ಎಸ್ವೈಎಸ್ ಅಧ್ಯಕ್ಷರು ಮತ್ತಿತರರು ಪಾಲ್ಗೊಂಡಿದ್ದರು.