*ಗೋಣಿಕೊಪ್ಪ, ಡಿ. ೧೦: ಗೋಣಿಕೊಪ್ಪಲು ಉಪವಿಭಾಗದ ಶ್ರೀಮಂಗಲ ಶಾಖೆಯ ೨೦೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯ ನಿರ್ವಹಣೆಯ ಹಿನ್ನೆಲೆ ತಾ. ೧೧ರಂದು ಹಾಗೂ ತಾ. ೧೨ ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಉಪವಿಭಾಗದ ಇಂಜಿನಿಯರ್ ನೀಲ್ಶೆಟ್ಟಿ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ೧೦ ರಿಂದ ಸಂಜೆ ೫ರವೆರೆಗೆ ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಾದ ಎಸ್.ಎಫ್೧ ಕಾನೂರು ಪೀಡರ್ನ ನಾಲ್ಕೇರಿ, ಹರಿಹರ, ಕೆ.ಬಾಡಗ, ಎಸ್.ಎಫ್೨ ಕುಟ್ಟ ಪೀಡರ್ನ ಕುಟ್ಟ, ಮಂಚಳ್ಳಿ, ನಾಗರಹೊಳೆ, ಕಾಯಿಮನೆ, ಎಸ್.ಎಫ್ ೩ ಬಿರುನಾಣಿ ಫಿಡರ್ನ ಟಿ.ಶೆಟ್ಟಿಗೇರಿ, ತೆರಾಲೌ, ಬಾಡಗರಕೇರಿ, ಪೂಕೊಳ, ತಾವಳಗೇರಿ, ಎಸ್.ಎಫ್ ೪ ಶ್ರೀಮಂಗಲ ಪೀಡರ್ನ ಶ್ರೀಮಂಗಲ ಟೌನ್, ಬೀರುಗ, ಕುರ್ಚಿ ಮತ್ತು ಸುತ್ತ ಸುತ್ತಮುತ್ತಲಿನ ವ್ಯಾಪ್ತಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.