ಮಡಿಕೇರಿ, ಡಿ. ೧೦: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ಇಂದು ಎನ್.ಯು. ನಾಚಪ್ಪ ನೇತೃತ್ವದ ನಿಯೋಗ ಉಡುಪಿಯಲ್ಲಿ ಆರ್ಥಿಕ ತಜ್ಞ ಹಾಗೂ ಮಾಜಿ ಕಾನೂನು ಸಚಿರ ಡಾ. ಸುಬ್ರಮಣ್ಯನ್ ಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಈ ಹಿಂದಿನಿAದಲೂ ಸಿಎನ್‌ಸಿ ಬೇಡಿಕೆ ಹಾಗೂ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಸುಬ್ರಮಣ್ಯ ಸ್ವಾಮಿ ಅವರು ಮುಂದೆಯೂ ತಮ್ಮ ಸಹಕಾರ ನೀಡುವುದಾಗಿ ಈ ಸಂದರ್ಭ ಭರವಸೆ ನೀಡಿದರು. ಇವರೊಂದಿಗೆ ಅವರ ಪತ್ನಿ ಹಿರಿಯ ವಕೀಲೆ ರೋಕ್ಸೋನಾ ಸ್ವಾಮಿ ಕಪಾಡಿಯಾ ಹಾಗೂ ಪ್ರಮುಖರಾದ ಜಗದೀಶ್ ಶೆಟ್ಟಿ ಅವರುಗಳೂ ನಿಯೋಗದೊಂದಿಗೆ ಚರ್ಚೆಯಲ್ಲಿ ಭಾಗಿಗಳಾಗಿದ್ದರು. ಮುಂದಿನ ಫೆಬ್ರವರಿಯಲ್ಲಿ ಸಂಘಟನೆಯಿAದ ನಡೆಯಲಿರುವ ವಿಚಾರ ಸಂಕರಣದಲ್ಲಿ ಪಾಲ್ಗೊಳ್ಳು ವುದಾಗಿ ಸ್ವಾಮಿ ಅವರು ಈ ಸಂದರ್ಭ ಒಪ್ಪಿಗೆ ನೀಡಿದ್ದಾರೆ. ನಾಚಪ್ಪ ಅವರೊಂದಿಗೆ ಕಲಿಯಂಡ ಪ್ರಕಾಶ್, ನಿವೃತ್ತ ಲೇ.ಕ. ಬಿ.ಎಂ. ಪಾರ್ವತಿ, ಚೆಂಬಾAಡ ಜನತ್ ಕುಮಾರ್, ಮಂದಪAಡ ಮನೋಜ್ ಮಂದಣ್ಣ ಪಾಲ್ಗೊಂಡಿದ್ದರು.