ನಾಪೋಕ್ಲು, ಡಿ. ೧೦: ಸಾರ್ವಜನಿಕ ಶಿಕ್ಷಣ ಇಲಾಖೆಯ, ಮಡಿಕೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಮಕ್ಕಳಿಗೆ ಫಿಸಿಯೋಥೆರಪಿ ಕಾರ್ಯದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಇಸಿಒ ಮಾರುತಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕೇಂದ್ರದ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಪೋಷಕರಿಗೆ ಮನವಿ ಮಾಡಿ ಪ್ರತಿದಿನ ಆದಷ್ಟು ಮಕ್ಕಳಿಗೆ ತೆರಪಿ ಕೊಡುವುದರಿಂದ ಮಕ್ಕಳಲ್ಲಿ ಪ್ರಗತಿಯನ್ನ ಕಾಣಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳು, ಪೋಷಕರು, ಕೇಂದ್ರದ ಬಿಆರ್‌ಪಿ, ಸಿಆರ್‌ಪಿಗಳು ಹಾಜರಿದ್ದರು. ಕಾರ್ಯಕ್ರಮದ ಮಾಹಿತಿಯನ್ನು ಶಾಂತ ಹಾಗೂ ವೀಣಾ ನೀಡಿದರು.