ಮಡಿಕೇರಿ, ಡಿ. ೧೦: ಗ್ರಾಮೀಣ ಭಾರತದಲ್ಲಿ ರಸ್ತೆ ಅಪಘಾತಗಳ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯು ಬೈಕ್ ಜಾಥಾ ಆಯೋಜಿಸಿತ್ತು.
ಉತ್ತಮ ಗುಣಮಟ್ಟದ ರಸ್ತೆಗಳು ಮತ್ತು ಶಕ್ತಿಯುತ ಬೈಕ್ಗಳಲ್ಲಿ ಸವಾರರು ಅನಿಯಂತ್ರಿತ ವೇಗದ ಸವಾರಿ ಮಾಡುತ್ತಿದ್ದು, ಸುರಕ್ಷತೆಯ ನಿಟ್ಟಿನಲ್ಲಿ ಕಳವಳಕಾರಿ ಬೆಳವಣಿಗೆಯಾಗಿದೆ.
ಈ ನಿಟ್ಟಿನಲ್ಲಿ ಸವಾರರಲ್ಲಿ ಜಾಗೃತಿ ಉಂಟು ಮಾಡಲು ವೀರಾಜಪೇಟೆ ರೋಟರಿ, ರೋಟರಿ ಮೈಸೂರು ಮತ್ತು ಸ್ವಾಮಿ ವಿವೇಕಾ ನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ ಜೀವರಕ್ಷಾ ಟ್ರಸ್ಟ್ ೨೦೧೮ ರಸ್ತೆ ಸುರಕ್ಷತಾ ಬೈಕಥಾನ್ ಜರುಗಿತು.
೧೧೦ ಬೈಕ್ ಸವಾರರು, ೨೦ ವಿಂಟೇಜ್ ಕಾರ್ನಲ್ಲಿ ಚಾಲಕರು ಈ ಬೈಕಾಥಾನ್ನಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶದ ಚಾಲಕರಲ್ಲಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವಿಕೆಯ ಬಗ್ಗೆ ಜಾಗೃತಿ. ಮೂಡಿಸುವ ನಿಟ್ಟಿನಲ್ಲಿ ಜಾಥಾ ಯಶಸ್ವಿಯಾಯಿತು. ಬೆಂಗಳೂರು, ಮೈಸೂರು ಮಾರ್ಗವಾಗಿ ಕೊಡಗಿನ ಗೋಣಿಕೊಪ್ಪ ಪ್ರವೇಶಿಸಿದ ಬೈಕಥಾನ್ ನಂತರ ವೀರಾಜಪೇಟೆ ಮಾರ್ಗವಾಗಿ ಮಡಿಕೇರಿ ತಲುಪಿ ಇಲ್ಲಿಯೂ ಜನಜಾಗೃತಿ ಸಂದೇಶ ಸಾರಿತು. ವೀರಾಜಪೇಟೆಯಲ್ಲಿ ರೋಟರಿ ಸದಸ್ಯರೊಂದಿಗೆ, ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಡಿಕೇರಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಾಥಾಕ್ಕೆ ಸಹಯೋಗ ನೀಡಿತ್ತು. ಕ್ಲಾಸಿಕ್ ಕಾರ್ ಕ್ಲಬ್, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಮತ್ತು ಆರೋಗ್ಯ ವಿಜ್ಞಾನಗಳು, ಟಿವಿಎಸ್ ಸಂಸ್ಥೆ ಸಹಯೋಗ ನೀಡಿತ್ತು. ಜಾಥಾದ ಮೂಲಕ ಕೊಡಗಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೈಕ್ ಹಾಗೂ ವಿಂಟೇಜ್ ಕಾರ್ ಸವಾರರು ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವಿಕೆ ಸಂಬAಧಿತ ಜಾಗೃತಿ ಮೂಡಿಸ ಲಾಯಿತು ಎಂದು ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಲವೀನ್ ಚಂಗಪ್ಪ ಮಾಹಿತಿ ನೀಡಿದ್ದಾರೆ.