ಹೊದ್ದೂರು, ಡಿ. ೧೦: ಮೂರ್ನಾಡಿನಿಂದ ಹೊದ್ದೂರಿಗಾಗಿ ನಾಪೋಕ್ಲುವಿಗೆ ಸಾಗುವ ರಸ್ತೆ ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ. ರಸ್ತೆಗೆ ಮರು ಡಾಂಬರೀಕರಣಕ್ಕೆ ಮೂರು ವರ್ಷಗಳಿಂದ ನಿರಂತರವಾಗಿ ಪ್ರಯತ್ನಗಳು ನಡೆದು ಹತ್ತಾರು ಬಾರಿ ಮನವಿಗಳನ್ನು ಸಲ್ಲಿಸಿ ಪ್ರತಿಭಟನೆಯ ಎಚ್ಚರಿಕೆಗಳನ್ನು ನೀಡಲಾಗಿದೆ. ಹಾಗಿದ್ದರೂ ಫಲ ಶೂನ್ಯ. ಈ ಹಿನ್ನೆಲೆಯಲ್ಲಿ ಹೊದ್ದೂರು ಗ್ರಾಮಸ್ಥರು, ಗ್ರಾ.ಪಂ. ಜನಪ್ರತಿನಿಧಿಗಳ ಮತ್ತು ಸಂಘ-ಸAಸ್ಥೆಗಳ ಸಹಕಾರ ದೊಂದಿಗೆ ತಾ. ೧೬ ರಂದು ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ. ಹೊದ್ದೂರು ಪಂಚಾಯಿತಿಯ ಆವರಣದಲ್ಲಿ ರಸ್ತೆಯ ಅವ್ಯವಸ್ಥೆ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕುಸು ಮಾವತಿ, ಸದಸ್ಯರುಗಳಾದ ಮೊಣ್ಣಪ್ಪ, ಎಂ.ಬಿ. ಹಮೀದ್, ಗ್ರಾಮಸ್ಥರು ಗಳಾದ ಕೋರನ ರಘು, ರವಿ, ಚೆಟ್ಟಿಮಾಡ ಲೋಕೇಶ್, ಚೌರೀರ ಸೋಮಣ್ಣ, ಅಪ್ಪಣ್ಣ, ನಿರನ್, ಕೂಡಂಡ ರವಿ, ಪೃಥ್ವಿ, ಮೇಕಂಡ ಗಣೇಶ್, ಸುನೀಲ್, ಪುನೀತ್, ಟಿ.ಆರ್. ಮಣಿ ಹಾಗೂ ಗ್ರಾಮಸ್ಥರು ಹಾಜರಿದ್ದರು.