ಕೂಡಿಗೆ, ಡಿ. ೧೦: ಕೂಡಿಗೆಯ ಯು.ಕೆ.ಎಫ್.ಸಿ.೨ ಆಶ್ರಯದಲ್ಲಿ ಎರಡನೇ ವರ್ಷದ ಲೀಗ್ ಫುಟ್ಬಾಲ್ ಪಂದ್ಯಾವಳಿಯು ಸತ್ಯ ಮತ್ತು ಪಿ.ಆರ್. ಫ್ರೆಂಡ್ಸ್ ಜ್ಞಾಪಕಾರ್ಥವಾಗಿ ಕೂಡಿಗೆಯ ಡಯಟ್ ಮೈದಾನದಲ್ಲಿ ನಡೆಯಿತು.

ಇದರಲ್ಲಿ ಮೇರಾಜ್ ಆಜ್ರೀಗೊ ವಾರಿಯರ್ ತಂಡ ಪ್ರಥಮ, ದ್ವಿತೀಯ ಸ್ಥಾನವನ್ನು ಸೆವೆನ್ ಸೂಟರ್ ತಂಡ ಪಡೆಯಿತು. ತೃತೀಯ ಸ್ಥಾನವನ್ನು ರಾಯಲ್ ಫ್ರೆಂಡ್ಸ್ ನಾಲ್ಕನೇ ಸ್ಥಾನವನ್ನು ಬುಲ್ ರೈಡರ್ ತಂಡ ಪಡೆದುಕೊಂಡಿತು.

ಬಹುಮಾನ ವಿತರಣೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಗಿರೀಶ್ ಸಹಕಾರ ಸಂಘದ ನಿರ್ದೇಶಕ ಬಸಪ್ಪ, ಮಂಜುಳ ಸೇರಿದಂತೆ ಪಂದ್ಯ ಆಯೋಜಕ ಪ್ರತಿನಿಧಿಗಳು ಹಾಜರಿದ್ದರು.