ವೀರಾಜಪೇಟೆ, ಡಿ. ೭: ಇಲ್ಲಿನ ವಿಜಯ ನಗರದ ನಿವಾಸಿ ಕೆ. ಕುಮಾರ್ ಮತ್ತು ವರಲಕ್ಷಿö್ಮ ದಂಪತಿ ಪುತ್ರ ಕೆ. ರಾಹುಲ್ (೨೦) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಒಂದು ನಿಮಿಷದಲ್ಲಿ ೨೬೨ ಬಾರಿ ಪಂಚ್ ಮತ್ತು ಕಿಕ್ ಮಾಡಿದ ಹಿನ್ನೆಲೆ ಸ್ಥಾನ ಲಭಿಸಿದೆ. ನಗರದ ಯುಚೇರಿಯೋ ಕರಾಟೆ ಶಾಲೆ ವಿದ್ಯಾರ್ಥಿಯಾಗಿರುವ ರಾಹುಲ್ ಸೇನ್ಸಾಯಿ ಹೆಚ್.ಆರ್. ಶಿವಪ್ಪ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆಯುವ ಗುರಿಯನ್ನು ರಾಹುಲ್ ಹೊಂದಿದ್ದಾರೆ.