ಮಡಿಕೇರಿ, ಡಿ. ೬: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿತ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ, ೨೦೨೦-೨೧ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಕನ್ನಡÀ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮರಾದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಿಕ ಪ್ರೌಢ ಶಾಲೆಯ ಸುಚಿತ ಕೆ.ಎಸ್. ಅವರಿಗೆ ಟಿ.ಪಿ. ರಮೇಶ್ ಅವರು ನೀಡಿರುವ ದತ್ತಿ ನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಸುಚಿತ ಅವರಿಗೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ತಾವು ಸ್ಥಾಪಿಸಿರುವ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸುಚಿತ ಅವರು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ೬೨೫ ಒಟ್ಟು ಅಂಕಕ್ಕೆ ೬೦೯ ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಟಿ.ಪಿ.ರಮೇಶ್ ಅವರು, ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಆಸಕ್ತಿಯನ್ನು ಎಳವೆಯಲ್ಲೆ ಮೂಡಿಸುವ ಕಾರ್ಯ ಅತ್ಯವಶ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹತ್ತು ಹಲ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇವತಿ ರಮೇಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ದೊರಕುವ ವೇದಿಕೆಯನ್ನು ಯುವ ಪ್ರತಿಭೆಗಳು ಸದ್ಬಳಕೆ ಮಾಡಿಕೊಳ್ಳು ವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷರು ಹಾಗೂ ಜಿಲ್ಲಾ ಕಸಾಪ ನೂತನ ಅಧ್ಯಕ್ಷರಾದ ಕೇಶವ ಕಾಮತ್, ಪ್ರತಿಯೊಬ್ಬ ಮಕ್ಕಳಲ್ಲು ಒಂದಿಲ್ಲ ಒಂದು ಪ್ರತಿಭೆ ಅಡಗಿ ರುತ್ತದೆ. ಇದನ್ನು ಗುರುತಿಸಿ ಪ್ರೋತ್ಸಾ ಹಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರದ್ದಾಗಿದೆ ಎಂದರು.

ಬಹುಮಾನ ವಿತರಣೆ: ರಾಜ್ಯೋತ್ಸವ ಪ್ರಯುಕ್ತ ಆಯೋಜಿತ ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಮಡಿಕೆೆÃರಿ ಸಂತ ಮೈಕೆಲರ ಶಾಲೆಯ ಸಂಧ್ಯಾ ಕೆ.ಎಂ. ಪ್ರಥಮ, ಸಂತ ಜೋಸೆಫರ ಶಾಲೆಯ ಸ್ವಪ್ನಾ ಮಧುಕರ್ ದ್ವಿತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸೋನಾ ಸೀತಮ್ಮ, ತೃತೀಯ, ಸಾರ್ವಜನಿಕ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಸ್ನೇಹ ಮಧುಕರ್ ಪ್ರಥಮ, ಮಧುಕರ್ ಶೇಟ್ ದ್ವಿತೀಯ, ಭಾರತಿ ರಮೇಶ್ ತೃತೀಯ ಬಹುಮಾನ ಪಡೆದು ಕೊಂಡರು. ವೇದಿಕೆಯಲ್ಲಿ ಬಳಗದ ಉಪಾಧ್ಯಕ್ಷ ಮೊಯಿದ್ದೀನ್, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿ ಶ್ರೀಧರ ಹೂವಲ್ಲಿ ಉಪಸ್ಥಿತರಿದ್ದರು. ಬಳಗದ ಎಸ್.ಐ. ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.