ಕೂಡಿಗೆ, ಡಿ. ೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರದ ಸಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಮೀಪದ ಮಾರುಕಟ್ಟೆಯ ಜಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಒಳಭಾಗದಲ್ಲಿ ನಡೆಯುತ್ತಿತ್ತು. ಅದರೆ ಇದೀಗ ಒಳಭಾಗದ ಬದಲು ಹೆದ್ದಾರಿಯ ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಜೋಡಿಸಿದ್ದಾರೆ. ಕೂಡಿಗೆ ಕುಶಾಲನಗರ ಹಾಸನ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ನೂರಾರು ವಾಹನಗಳ ಸಂಚಾರ ಅಧಿಕವಾಗಿದ್ದರೂ ಸಹ, ಹೆದ್ದಾರಿ ರಸ್ತೆಯಲ್ಲಿ ಅಂಗಡಿಗಳು ತೆರೆಯಲ್ಪಟ್ಟಿವೆ. ಈ ಜಾಗವನ್ನು ತೆರವುಗೊಳಿಸಿ ಬದಲಿ ಜಾಗವನ್ನು ಗುರುತಿಸುವಂತೆ ಗ್ರಾಮ ಪಂಚಾಯಿತಿ ಮುಂದಾಗಬೇಕೆAದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶನಿವಾರ ನಡೆಯುವ ವಾರದ ಸಂತೆಯ ಸಂದರ್ಭದಲ್ಲಿ ಹೆದ್ದಾರಿಯ ವಾಹನಗಳ ದಟ್ಟಣೆಯಿಂದಾಗಿ ಅನೇಕ ಅವಘಡಗಳು ಸಂಭವಿಸಿವೆ. ಅಲ್ಲದೆ ಮೊದಲು ಕಿರಿದಾಗಿದ್ದ ವಾರದ ಸಂತೆಗೆ ಇದೀಗ ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಿದ್ದಾರೆ; ಅಲ್ಲದೆ ಹೊರ ಜಿಲ್ಲೆಗಳಿಂದ ವ್ಯಾಪಾರಸ್ಥರು ಸಹ ಬರುತ್ತಿದ್ದಾರೆ. ಸಣ್ಣ ಮಾರುಕಟ್ಟೆಯ ಬದಲು ಸಮೀಪದ ಕೃಷಿ ಕ್ಷೇತ್ರದ ಆವರಣದಲ್ಲಿ ಖಾಲಿ ಇರುವ ಜಾಗವನ್ನು ಗುರುತಿಸಿ ಆ ಭಾಗದಲ್ಲಿ ವಾರದ ಸಂತೆಯನ್ನು ನಡೆಸಲು ಮುಂದಾಗಬೇಕೆAದು ಆಗ್ರಹಿಸಿದ್ದಾರೆ.