ನಾಪೋಕ್ಲು: ಕಳೆದ ಒಂದು ತಿಂಗಳಿAದ ನಾಪೋಕ್ಲು ಗ್ರಾಮದ ಕಲ್ಲಮೊಟ್ಟೆಯ ಕಕ್ಕುಂದ ಕಾಡುವಿನ ಶ್ರೀ ಲಕ್ಷಿö್ಮ ವೇಂಕಟೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆಸುತ್ತಾ ಬಂದಿರುವ ಕಾರ್ಯಕ್ರಮವು ರಂಗ ಪೂಜಾ ವಿಧಿ ವಿಧಾನಗಳಿಂದ ಸಂಪನ್ನಗೊAಡಿತ್ತು.

ದೇವಾಲಯದಲ್ಲಿ ಕಲಶ ಪೂಜೆ, ಪಂಚಮೃತಾಭಿಷೇಕ ಪೂಜೆಯನ್ನು ನಡೆಸಿ ನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ಮತ್ತು ಸುಭಿಕ್ಷೆಗಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭ ದೇವಾಲಯದ ಸುತ್ತಲು ಸಾವಿರಾರು ದೀಪವನ್ನು ಬೆಳಗಿಸಲಾಯಿತು. ಈ ಸಂದರ್ಭ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯವನ್ನು ಅರ್ಚಕರಾದ ಸುಧೀರ್ ಕೆಕುಣ್ಣಾಯ, ಮತ್ತು ಸದಾಶಿನ ಉಪಾದ್ಯಾಯ ರಂಜಲ ನಡೆಸಿಕೊಟ್ಟರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು.

ಈ ಸಂದರ್ಭ ದೇವಳ ಸಮಿತಿಯ ಅಧ್ಯಕ್ಷ ಮಂಜಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಪಿ. ಗೋಪಾಲ, ಮಂಡೀರ ನಂಜಪ್ಪ, ದೇವಿ ಪ್ರಸಾದ್‌ಕಟ್ಟೆಮಾಡು, ಸೂರ್ಯಕುಮಾರ್, ಪ್ರವೀಣ್ ರೈ, ಬಾಳೆಯಡ ದಿವ್ಯ ಮಂದಪ್ಪ, ಆನಂದ ಸ್ವಾಮಿ, ಶ್ರೀನಿವಾಸ್ ಮತ್ತಿತರರು ಇದ್ದರು.