ಸೋಮವಾರಪೇಟೆ, ಡಿ. ೬: ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಕಳೆದ ೬ ತಿಂಗಳಿನಿAದ ನಿರ್ಗತಿಕರಾಗಿದ್ದ ವ್ಯಕ್ತಿಯೋರ್ವರ ನೆರವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಧಾವಿಸಿದ್ದು, ಅವರನ್ನು ಮಡಿಕೇರಿಯ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸುಮಾರು ೬೬ ವರ್ಷ ಪ್ರಾಯದ ವಿಜಯ ಎಂಬವರು ತಮ್ಮ ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಪಟ್ಟಣದ ಮಾರುಕಟ್ಟೆಯಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗಮನಿಸಿದ ಕರವೇ ಕಾರ್ಯಕರ್ತರು ವೃದ್ದರಿಗೆ ಕ್ಷೌರ ಹಾಗೂ ಸ್ನಾನ ಮಾಡಿಸಿದರು. ಪಟ್ಟಣದ ಮನುಕುಮಾರ್ ರೈ, ಆಶಾ ಪುಟ್ಟರಾಜು, ಮಧು, ಕೆ.ಪಿ. ಸುದರ್ಶನ್, ನ.ಲ. ವಿಜಯ, ಕೆ.ಎ. ಪ್ರಕಾಶ್ ಅವರ ಸಹಕಾರದಿಂದ ವೃದ್ದರಿಗೆ ದಿನೋಪಯೋಗಿ ವಸ್ತುಗಳೊಂದಿಗೆ ಉಡುಗೆ ತೊಡುಗೆ ನೀಡಿ ಮಡಿಕೇರಿಯ ಶಕ್ತಿಧಾಮಕ್ಕೆ ಸೇರಿಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ರಾಮದಾಸ್, ಜೀವನ್, ಆನಂದ, ಕರವೇ ಪದಾಧಿಕಾರಿಗಳಾದ ಚಂದ್ರು, ವೆಂಕಟೇಶ, ಅಭಿಲಾಷ್, ಜಿತನ್, ಮಂಜು, ಸವಿತ ಸಮಾಜದ ಚಂದನ್ ಅವರುಗಳು, ವಿಜಯ ಅವರ ನೆರವಿಗೆ ನಿಂತು, ಮಡಿಕೇರಿಯ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ದಾಖಲಿಸಿದರು.