ನಾಪೋಕ್ಲು, ಡಿ. ೫ : ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ನಾವು ಪುರುಷರಷ್ಟೆ ಸಾಮರ್ಥ್ಯವುಳ್ಳವರು ಎಂದು ಸಾಬೀತುಪಡಿಸಿದ್ದಾರೆ ಎಂದು ಕಾಫಿ ಬೆಳೆಗಾರ ಮಂಡೀರ ಜಯ ದೇವಯ್ಯ ಹೇಳಿದರು. ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇಂತಹ ಸ್ಪರ್ಧೆಯನ್ನು ಏರ್ಪಡಿಸಿದ ಮಹಿಳಾ ಸಮಾಜದ ಸದಸ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಕ್ಕೆ ಊರಿನವರ ಸಹಕಾರ ಮುಖ್ಯ ಎಲ್ಲರೂ ಕೈಜೋಡಿಸಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಫಿ ಬೆಳೆಗಾರ ಕಲಿಯಂಡ ನಾಣಯ್ಯ ಹಾಗೂ ಖಾಸಗಿ ರೆಸಾರ್ಟ್ನ ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್‌ಸುಬ್ಬಯ್ಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧÀ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪಾಡೇಯಂಡ ಕಾರ್ಯಪ್ಪ, ಬಡುವಂಡ ಮುತ್ತಣ್ಣ, ಕೋದಂಡ ಸುಬ್ಬಯ್ಯ, ಅಪ್ಪುಮಣಿಯಂಡ ಸನ್ನು ಸೋಮಣ್ಣ, ಮತ್ತಿತರರು ಇದ್ದರು. ಅಪ್ಪುಮಣಿಯಂಡ ಡೈಸಿ ಸೋಮಣ್ಣ ಸ್ವಾಗತಿಸಿದರು. ಮಣವಟ್ಟೀರ ಜಾನ್ಸಿ ತಿಮ್ಮಯ್ಯ ಪ್ರಾರ್ಥಿಸಿದರು. ಮಕ್ಕಳ ಸ್ವಾಗತ ನೃತ್ಯ ಕಾರ್ಯಕ್ರಮದ ಗಮನ ಸೆಳೆಯಿತು. ಡೈಸಿ ವಂದಿಸಿದರು.

ಸ್ಪರ್ಧಾ ವಿಜೇತರು: .೨೨ ವಿಭಾಗದಲ್ಲಿ ಪುತ್ತರೀರ ನಂಜಪ್ಪ ಪ್ರಥಮ, ಬ್ರಿಜೇಶ್ ದ್ವಿತೀಯ, ಮನಿಯಪಂಡ ನಾಣಯ್ಯ ತೃತೀಯ ಸ್ಥಾನಗಳಿಸಿದರು. ೧೨ ಬೋರ್‌ನಲ್ಲಿ ಚೀಯಕಪೂವಂಡ ಸುಜಾ ಪ್ರಥಮ, ಚೋನಿರ ಸಜನ್ ದ್ವಿತೀಯ, ಮನಿಯಪಂಡ ನಾಣಯ್ಯ ತೃತೀಯ ಬಹುಮಾನ ಪಡೆದುಕೊಂಡರು.

.೨೨ ವಿಭಾಗಕ್ಕೆ ಅಪ್ಪುಮಣಿಯಂಡ ಸನ್ನು ಸೋಮಣ್ಣ, ೧೨ ಬೋರ್ ವಿಭಾಗಕ್ಕೆ ಮುಕ್ಕಾಟಿರ ಚಿಣ್ಣಪ್ಪ, ಹಗ್ಗಜಗ್ಗಾಟ ಪುರುಷರ ವಿಭಾಗಕ್ಕೆ ನೆಲಜಿಯ ಅಂಬಲ ಮಹಿಳಾ ಸಮಾಜ, ಮಹಿಳಾ ವಿಭಾಗಕ್ಕೆ ಅಲ್ಲಾರಂಡ ಭಾರತಿ ಧನುಕುಮಾರ್ ಟ್ರೋಫಿಗಳನ್ನು ಪ್ರಾಯೋಜಿಸಿದ್ದಾರೆ.