*ಗೋಣಿಕೊಪ್ಪ, ಡಿ. ೩: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ-ಯು.ಕೆ.ಜಿ ಮತ್ತು ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪ ರೋಟರಿ ಸಂಸ್ಥೆಯ ನೇತೃತ್ವದೊಂದಿಗೆ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಕುರ್ಚಿಗಳನ್ನು ವಿತರಿಸಿದರು.
ಎಂ.ಜಿ. ಮೋಹನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಿ ಕುರ್ಚಿಗಳ ವಿತರಣೆ ಕಾರ್ಯ ನಡೆಸಲಾಯಿತು.
ಎಂ.ಜಿ. ಮೋಹನ್ ೫೦, ರೋಟರಿ ಸಂಸ್ಥೆಯ ಕೋಶಾಧಿಕಾರಿ ಪ್ರಮೋದ್ ಕಾಮತ್ ೨೫ ಹಾಗೂ ಮಹೇಂದ್ರ ೨೫ ಸೇರಿದಂತೆ ಒಟ್ಟು ನೂರು ಕುರ್ಚಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ಇದೇ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೇಶವ ಕಾಮತ್, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಐಚ್ಛಿಕ ವಿಷಯದ ಬಗ್ಗೆ ಹೆಚ್ಚಿನ ಪ್ರೋತ್ಸಾಹಕ್ಕೆ ಶಿಕ್ಷಕರು ಮುಂದಾದಾಗ ಮಕ್ಕಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ. ಈ ವಿಚಾರವಾಗಿ ಶಿಕ್ಷಕರು ಮನಃಪೂರ್ವಕವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ನೀತಾ ಕಾವೇರಮ್ಮ, ಖಜಾಂಚಿ ಪ್ರಮೋದ್ ಕಾಮತ್, ಸದಸ್ಯ ಕಿಶೋರ್ ಮಾದಪ್ಪ, ಮಾಜಿ ಅಧ್ಯಕ್ಷ ನವೀನ್, ಸಿ.ಆರ್.ಪಿ. ವಾಮನ, ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಜ್ಯೋತಿಶ್ವರಿ, ಮುಖ್ಯಶಿಕ್ಷಕ ಬಿ.ಆರ್. ಸತೀಶ್, ಸಹ ಶಿಕ್ಷಕರುಗಳಾದ ಅನಿತಾ ಕುಮಾರಿ, ದಮಯಂತಿ, ರಮಾನಂದ, ಸರಸ್ವತಿ, ನಿರ್ಮಲ, ಮಾಲಿನಿ, ಇಂದಿರಾ, ತ್ರಿವೇಣಿ, ಶಾರದಾ, ಜೋಸ್ಲಿಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ದೇವಮ್ಮ, ಸುಮ, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.