ಮಡಿಕೇರಿ, ಡಿ. ೩: ಬೆಂಗಳೂರಿನ ಬನವಾಸಿ ಕನ್ನಡಿಗರು ಸಂಘಟನೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ಬನವಾಸಿ ಕನ್ನಡಿಗ ಪ್ರಶಸ್ತಿಗೆ ಈ ಬಾರಿ ಕೊಡಗು ಜಿಲ್ಲೆಯ ಮೂವರು ಸಾಧಕರು ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕಣಿವೆ ನಿವಾಸಿ, ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ, ಸಮಾಜ ಸೇವೆಗಾಗಿ ಮಡಿಕೇರಿಯ ಚೈನ್ಗೇಟ್ ನಿವಾಸಿ, ಕೊಡಗು ಬ್ಲಡ್ ಡೋರ್ಸ್ ಸಂಘದ ಅಧ್ಯಕ್ಷ ಹಾಗೂ ಬ್ಲಡ್ ಫೌಂಡೇಶನ್ ಸಂಸ್ಥೆಯ ರಾಜ್ಯಾಧ್ಯಕ್ಷ ಹೆಚ್.ಆರ್. ವಿನು ಹಾಗೂ ಮೂಲತಃ ಜಿಲ್ಲೆಯ ಪಾಲೂರು ನಿವಾಸಿ, ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ‘ಸಾಧ್ಯ’ ವಿಶೇಷಚೇತನ ಮಕ್ಕಳ ಶಾಲೆ ನಡೆಸುತ್ತಿರುವ ಅಚ್ಚುಡ ಆರತಿ ಹರೀಶ್ ಅವರುಗಳು ಭಾಜನರಾಗಿದ್ದಾರೆ ಎಂದು ಬನವಾಸಿ ಕನ್ನಡಿಗರು ಸಂಘಟನೆಯ ಪ್ರಮುಖರಾದ ಜೈಕಿರಣ್ ಹಾಗೂ ಕಿರಣ್ಮಯಿ ಅವರುಗಳು ತಿಳಿಸಿದ್ದಾರೆ.