ಮಡಿಕೇರಿ, ಡಿ. ೩: ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಮಹಾಸಭೆಯನ್ನು ಸಂಸ್ಥೆಯ ಚೇತನ ಚಿಲುಮೆ ಸಭಾಂಗಣದಲ್ಲಿ ತಾ. ೪ ರಂದು (ಇಂದು) ಪೂರ್ವಾಹ್ನ ೧೦.೩೦ ಗಂಟೆಗೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಮಿತ ಆರ್. ರೈ ತಿಳಿಸಿದ್ದಾರೆ.