ಮಡಿಕೇರಿ, ಡಿ. ೨: ೨೦೦೧ರಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆ ಪ್ರಾರಂಭಿಸಿದ ಕೊಡಗಿನ ಕುಶಾಲನಗರದ ಮರ್ವಿನ್ ಕೊರೆಯ ಅವರು ಇದೀಗ ಸ್ವಯಂ ನಿವೃತ್ತಿ ಹೊಂದಿ ರಾಜಕೀಯ ಪ್ರವೇಶಿಸಿದ್ದಾರೆ.

ಸಿಆರ್‌ಪಿಎಫ್ ಮೂಲಕ ಸೇರ್ಪಡೆಯಾದ ಇವರು ಸುಮಾರು ೨೦ ವರ್ಷ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರಿಂದ ಪ್ರಭಾವಿತರಾದ ಸಿಆರ್‌ಪಿಎಫ್‌ನಲ್ಲಿ ಎಸ್.ಐ. ಆಗಿದ್ದ ಮರ್ವಿನ್ ಅವರು ಇನ್ನೂ ಸುಮಾರು ೨೧ ವರ್ಷದ ಸೇವೆ ಬಾಕಿ ಇದ್ದರೂ ಸ್ವಯಂ ನಿವೃತ್ತಿ ಪಡೆದರು. ಛತ್ತೀಸ್ಘಡದ ಸುಕ್ಮಾ ಜಿಲ್ಲೆಯ ಅಟಲ್ ಸದನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆರ್ವಿನ್ ಕೊರಿಯಾ ಅವರು ಅಲ್ಲಿನ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷೆ ದೀಪಿಕಾ ಶೋರಿ ಮತ್ತು ವಿಭಾಗೀಯ ಅಧ್ಯಕ್ಷ ವಿನೋದ್ ಬೈಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವವನ್ನು ವಿಧಿವತ್ತಾಗಿ ಸ್ವೀಕರಿಸಿದರು.