ಸುAಟಿಕೊಪ್ಪ,ಡಿ.೨: ಇದೇ ೫ರಿಂದ ೧೨ರವರೆಗೆ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿ ಮಹಿಳಾ ಹಾಕಿ ಪಂದ್ಯಾವಳಿಯು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯಲಿದ್ದು ಭಾರತ ಮಹಿಳಾ ತಂಡದ ಸಹಾಯಕ ಕೋಚ್ ಆಗಿ ಆಯ್ಕೆ ಆಗಿರುವ ಜಿಲ್ಲೆಯ ಕಂಬಿಬಾಣೆಯ ಅಂಕಿತಾ ಸುರೇಶ್ ಅವರು ತಂಡದೊAದಿಗೆ ದಕ್ಷಿಣ ಕೊರಿಯಕ್ಕೆ ಪ್ರಯಾಣ ಬೆಳೆಸಿದ್ದಾರೆ.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಈ ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಷಿಪ್ ಟ್ರೋಫಿ ಮಹಿಳಾ ಹಾಕಿ ಪಂದ್ಯಾವಳಿಯ ಭಾರತ ತಂಡದ ಸಹಾಯಕ ಕೋಚ್ ಆಗಿ ಅಂಕಿತಾ ಸುರೇಶ್ ಆವರು ಕಾರ್ಯ ನಿರ್ವಹಿಸಲಿದ್ದು, ಇವರು ಸಹಾಯಕ ಕೋಚ್ ಜವಾಬ್ದಾರಿಯೊಂದಿಗೆ ತಂಡದ ವ್ಯವಸ್ಥಾಪಕರಾಗಿಯೂ ಕೂಡ ಉಸ್ತುವಾರಿ ವಹಿಸಲಿದ್ದಾರೆ. ಟೋಕಿಯೋ ಒಲಂಪಿಕ್ಸ್ ನಂತರ ಭಾರತ ಸೀನಿಯರ್ ಮಹಿಳಾ ಹಾಕಿ ತಂಡವು ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಅಂರ‍್ರಾಷ್ಟಿçÃಯ ಪಂದ್ಯಾವಳಿ ಇದಾಗಿದೆ.

ತಾ. ೫ ರಿಂದ ೧೨ ರ ವರೆಗೆ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಏರ್ಪಟ್ಟಿರುವ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿಯ ಹಣಾಹಣಿಯಲ್ಲಿ ಭಾರತ ಮಹಿಳಾ ತಂಡವು ಹಾಕಿ ಕ್ರೀಡೆಯ ಚಾಕಚಕ್ಯತೆಯನ್ನು ಪ್ರದರ್ಶಿಸಲಿದೆ. ಈಗಾಗಲೇ ಭಾರತ ಮಹಿಳಾ ಹಾಕಿ ತಂಡವು ಸಿಯೋಲ್‌ಗೆ ತಲುಪಿದೆ. ಹಾಕಿ ಕ್ರೀಡೆಯಲ್ಲಿ ರಾಷ್ಟçದ ಚಿತ್ತವನ್ನು ಕೊಡಗಿನತ್ತ ಹರಿಸುವಂತೆ ಮಾಡಿರುವ ಅಂಕಿತಾ ಸುರೇಶ್ ಅವರು ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ.