ಶನಿವಾರಸಂತೆ, ಡಿ. ೧: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೀಲನಾ ಗ್ರಾಮ ಸಭೆ ಅಧ್ಯಕ್ಷೆ ಪೂರ್ಣಿಮಾಕಿರಣ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು, ಕೆರೆ ಸ್ವಚ್ಛತೆ ಮತ್ತಿತರ ಕಾಮಗಾರಿಗಳ ಬಗ್ಗೆ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನೋಡೆಲ್ ಅಧಿಖಾರಿ ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ೨೦೨೦-೨೧ನೇ ಸಾಲಿನ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ೧೪-೧೫ನೇ ಯೋಜನೆಯ ಕಾಮಗಾರಿಗಳ ಪರಿಶೀಲನೆ ಹಾಗೂ ಕಾಮಗಾರಿಗಳ ಹಣಕಾಸು, ಜಮಾ - ಖರ್ಚಿನ ವಿವರವನ್ನು ತಿಳಿಸಿದರು. ತಾಲೂಕು ಪಂಚಾಯಿತಿ ನೋಡೆಲ್ ಅಧಿಕಾರಿ ದಿನೇಶ್ ಕಾಮಗಾರಿಗಳ ಬಗ್ಗೆ ಬಂದ ಆಕ್ಷೇಪಣೆಗಳನ್ನು ಸಭೆಗೆ ತಿಳಿಸಿ, ಹಣಕಾಸಿನ ಬಳಕೆಯ ದಾಖಲಾತಿಗಳನ್ನು ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಕೆಲಸವನ್ನು ಜೆಸಿಬಿ ಯಂತ್ರ ಬಳಸಿ ಮಾಡಲಾಗಿದೆ ಎಂಬ ಆಕ್ಷೇಪವನ್ನು ಸಭೆಯಲ್ಲಿ ಗ್ರಾಮಸ್ಥರು ವ್ಯಕ್ತಪಡಿಸಿದರು. ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಪಂಚಾಯಿತಿ ವತಿಯಿಂದ ಯಾವುದೇ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿ ಕೆಲಸಗಳು ಪಾರದರ್ಶಕವಾಗಿರಲಿ ಎಂದು ಆಗ್ರಹಿಸಿದರು.
ಗ್ರಾಮಸ್ಥರ ಆಕ್ಷೇಪಣೆಗಳಿಗೆ ಒಳಗಾದ ಕೆರೆ ಮತ್ತಿತರ ಕಾಮಗಾರಿಗಳು ನಡೆದ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪಂಚಾಯಿತಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರಾದ ಎಸ್.ಪಿ. ಭಾಗ್ಯ, ಪಿ.ಎಚ್. ಗೋಪಿಕಾ, ಸತ್ಯವತಿ, ಎಚ್.ಆರ್. ಭವಾನಿ, ನಂದಿನಿ, ಕೆ.ಎಸ್. ಜಾನಕಿ, ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಬಿ.ಎಸ್. ಮಹಾಂತೇಶ್, ಎಂ.ಡಿ. ದೇವರಾಜ್, ಎಸ್.ಸಿ. ಕಾಂತರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.