ಮಡಿಕೇರಿ, ಡಿ. ೧: ಪ್ರವಾಹದಿಂದ ಮನೆ ಹಾನಿಯಾದ ಪ್ರಕರಣಗಳ ‘ಎ’, ‘ಬಿ’ ಮತ್ತು ‘ಸಿ’ ವರ್ಗಾವಾರು ವಿವರಗಳನ್ನು ಖಉಖಊಅಐ ತಂತ್ರಾAಶದಲ್ಲಿ ಅ. ೩೦ ರೊಳಗೆ ದಾಖಲಿಸುವಂತೆ ತಿಳಿಸಲಾಗಿತ್ತು. ತದನಂತರ ನವೆಂಬರ್ ತಿಂಗಳಲ್ಲೂ ಕೂಡ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ, ಮನೆ ಹಾನಿಯಾದ ಪ್ರಕರಣಗಳ ವಿವರಗಳನ್ನು ಖಉಖಊಅಐ ತಂತ್ರಾAಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾAಶದಲ್ಲಿ ದಾಖಲಿಸಲು ನ. ೩೦ರವರೆಗೆ ಅವಕಾಶ ನೀಡಲಾಗಿತ್ತು.ಇದೀಗ ಈ ಅವಧಿಯನ್ನು ಅಂತಿಮವಾಗಿ ತಾ. ೭ರವರೆಗೆ ವಿಸ್ತರಿಸಲಾಗಿದೆ. ಈ ಕಾಲಮಿತಿಯೊಳಗೆ ಮನೆ ಹಾನಿಯಾದ ಪ್ರಕರಣಗಳ ವಿವರಗಳನ್ನು ಖಉಖಊಅಐ ತಂತ್ರಾAಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾAಶದಲ್ಲಿ ನಿಯಮಾನುಸಾರ ದಾಖಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಕೆ.ಸಿ. ಕುಮಾರ್ ಸೂಚನೆ ನೀಡಿದ್ದಾರೆ.