ಕೂಡಿಗೆ, ಡಿ. ೧: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ೫೩ನೇ ಚಂಪಾ ಷಷ್ಠಿಯ ಮಹೋತ್ಸವ ತಾ. ೯ ರಂದು ನಡೆಯಲಿದೆ. ಕಾರ್ತಿಕ ಮಾಸದ ಪೂಜೆಗಳು ತಾ. ೫ ರಿಂದ ಪ್ರಾರಂಭಗೊAಡು ೯ ರವರೆಗೆ ನಡೆಯಲಿದೆ. ಈ ಬಾರಿಯೂ ಸರಕಾರದ ಮಾರ್ಗಸೂಚಿ ಅನ್ವಯ ಎಲ್ಲಾ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ದೇವಸ್ಥಾನದ ಆವರಣದಲ್ಲಿಯೇ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.