ಮಡಿಕೇರಿ, ಡಿ. ೧: ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಮರ್ಪಕವಾದ ಪ್ರಸ್ತಾವನೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದನ್ನು ಅಲ್ಲಾರಂಡ ರಂಗಚಾವಡಿ ಸ್ವಾಗತಿಸಿದ್ದು, ಕೊಡಗಿನಲ್ಲೇ ಕ್ರೀಡಾ ವಿಶ್ವ ವಿದ್ಯಾಲಯ ಆಗಬೇಕು ಎಂದು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ, ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ ನಮ್ಮ ಆಶಯವಾಗಿದೆ. ಅದು ಈ ಪುಟ್ಟ ಜಿಲ್ಲೆಯ ಕ್ರೀಡಾ ಪರಂಪರೆಗೆ ಸರ್ಕಾರ ನೀಡುವ ಗೌರವ. ಬಹಳಷ್ಟು ಕ್ರೀಡಾ ಪ್ರಶಸ್ತಿಗಳನ್ನು ಕೊಡಗಿನ ಕ್ರೀಡಾಪಟುಗಳು ಪಡೆದುಕೊಂಡಿದ್ದು, ಮುಂದೆಯೂ ಪಡೆದು ಕೊಳ್ಳುವರಿದ್ದಾರೆ. ಹಾಕಿ ನಮ್ಮೆಯಂತೂ ದಾಖಲೆ ನಿರ್ಮಿಸಿದೆ. ಹಾಗೆಯೆ ವಿವಿಧ ಆಯಾಮದಲ್ಲಿ ಹಲವಾರು ಬಗೆಯ ಕ್ರೀಡಾ ಕೂಟಗಳಿಂದ ಕೊಡಗಿನ ಕಾಣಿಕೆ ದೊಡ್ಡದಿದೆ ಎಂದು ಹೇಳಿದರು.
ಹಾಕಿ ಕ್ರೀಡೆಯಲ್ಲಿ ಉತ್ತರ ಭಾರತದಲ್ಲಿ ಪಂಜಾಬ್ ಹೆಸರು ಮಾಡಿದ್ದರೆ, ದಕ್ಷಿಣ ಭಾರತದಲ್ಲಿ ಕೊಡಗಿನ ಕಾಣಿಕೆ ಬಹಳ ದೊಡ್ಡದು ಮತ್ತು ಹಾಕಿಯ ತವರೆಂದೇ ಕೊಡಗು ಕರೆಸಿಕೊಂಡಿದೆ.
ಈ ಎಲ್ಲಾ ಕಾರಣಗಳಿಂದ ಕ್ರೀಡಾ ವಿ.ವಿ.ಗೆ ಕೊಡಗಿನ ವಾತಾವರಣವೂ ಪೂರಕವಾಗಿದೆ. ಭಾರತದ ಹಾಕಿ ಲೋಕದ ತಂಡದಲ್ಲಿ ಕೊಡಗಿನ ಕನಿಷ್ಟ ಐದು ಕ್ರೀಡಾಪಟುಗಳು ಇರುತ್ತಿದ್ದುದನ್ನೂ ಗಮನಿಸಿಕೊಳ್ಳಬೇಕಿದೆ.
ಕೊಡಗಿನಲ್ಲೇ ಕ್ರೀಡಾ ವಿ.ವಿ. ಸ್ಥಾಪನೆಯಾಗುವುದಕ್ಕೆ ಎಲ್ಲಾ ಜನಪ್ರತಿನಿಧಿಗಳು, ರಾಜಕೀಯ ದುರೀಣರು, ಖ್ಯಾತ ಕ್ರೀಡಾಪಟುಗಳು ಹಾಗೂ ಉದಯೋನ್ಮುಖ ಆಟಗಾರರ ಗಟ್ಟಿಮನಸ್ಸುಗಳು ಈ ವಿಚಾರದಲ್ಲಿ ಒಂದಾಗಿ ಸೇರಿಕೊಂಡು ಶ್ರಮವಹಿಸಬೇಕಿದೆ ಎಂದು ಹೇಳಿದರು.
ಪ್ರಸ್ತಾವನೆ ತಯಾರಿಸಲು ತಜ್ಞರು, ಅನುಭವಿ ಆಟಗಾರರೆಲ್ಲರೂ ಸರಕಾರಕ್ಕೆ ಸಲಹೆ-ಸಹಕಾರ ನೀಡಬೇಕಿದೆ,
ಪ್ರಸ್ತಾವನೆಯಲ್ಲಿ ಗಟ್ಟಿತನವಿಲ್ಲದಿದ್ದರೇ ರಾಜಕೀಯವಾಗಿ ಕೂಡ ಅದು ಕೊಡಗಿಗೆ ದಕ್ಕದೆ ಹೋಗುವ ಅವಕಾಶವನ್ನೂ ತಳ್ಳಿ ಹಾಕುವಂತಿಲ್ಲ ಎಂದರು.
ಭಾರತದಲ್ಲಿ ಮದ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಿಟ್ಟರೆ ಇನ್ನೆಲ್ಲಿಯೂ ಕ್ರೀಡಾ ವಿಶ್ವವಿದ್ಯಾಲಯ ಇಲ್ಲ. ಹಾಗಾಗಿ ಕ್ರೀಡಾರಂಗದಲ್ಲಿ ಆಸಕ್ತಿ ಇರುವ ಕರ್ನಾಟಕದ ಅದರಲ್ಲೂ ಕ್ರೀಡಾರಂಗಕ್ಕೆ ಬಹು ಕಾಣಿಕೆ ನೀಡಿರುವ ಕೊಡಗಿನ ಕ್ರೀಡಾಪಟುಗಳು ಜಿಲ್ಲೆಯಿಂದ ಹಾಗೂ ರಾಜ್ಯದಿಂದ ಹೊರಗಡೆ ಕ್ರೀಡಾಭ್ಯಾಸಕ್ಕೆ ಶ್ರಮಿಸುವ ದುರಂತ ನೋಡುತ್ತಿದ್ದೇವೆ.
ಕ್ರೀಡಾ ವಿಶ್ವವಿದ್ಯಾಲಯದ ರೂಪುರೇಷೆ ಬಗ್ಗೆ ವಿಶೇಷ ತಜ್ಞರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ವರದಿಯನ್ನು ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಸೂಕ್ತ. ಜಿಲ್ಲಾಧಿಕಾರಿಗಳು ೧೬ ಮಂದಿ ಸದಸ್ಯರ ಹೆಸರನ್ನು ಆಯ್ಕೆ ಮಾಡಲು ಸರ್ಕಾರಕ್ಕೆ ಸೂಚಿಸುವುದು ಉತ್ತಮ ಎಂದು ಅಭಿಪ್ರಾಯಿಸಿದರು.
ಕೊಡಗಿಗೆ ಬೇಕಾಗಿರುವುದು ಅಂತರರಾಷ್ಟಿçÃಯ ದರ್ಜೆಯ ಸಿಂಥೆಟಿಕ್ ಟ್ರಾö್ಯಕ್. ಅಥ್ಲೆಟಿಕ್ ಕ್ರೀಡಾಂಗಣ ನಿರ್ಮಿಸಬೇಕಾದರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಸೂಕ್ತ ಸ್ಥಳ. ಇದನ್ನು ಬಿಟ್ಟು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೪೦೦ ಮೀ. ದೂರದ ಅಥ್ಲೆಟಿಕ್ ಟ್ರಾö್ಯಕ್ ನಿರ್ಮಿಸುವುದರಲ್ಲಿ ಅರ್ಥವೇ ಇಲ್ಲ. ಇದು ಬಹಳಷ್ಟು ಕ್ರೀಡಾ ತಜ್ಞರ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ನಮ್ಮ ದೇಶದ ಹಾಕಿ ತಂಡದಲ್ಲಿ ಶೇ.೫೦ರಷ್ಟು ಕೊಡಗಿನ ಆಟಗಾರರಿರುತ್ತಿದ್ದರು, ಆ ನಿಟ್ಟಿನಲ್ಲಿ ಕೊಡಗಿನಲ್ಲಿ ವಿವಿ ಸ್ಥಾಪನೆಯಾಗಬೇಕು; ಯಾವದೇ ಯೋಜನೆಗಳು ತರಾತುರಿಯೊಂದಿಗೆ ಕಾಟಾಚಾರಕ್ಕೆ ಜಾರಿಯಾದಂತಾಗಿ ಮತ್ತೆ ಕಡೆಗಣನೆಯಾಗುತ್ತವೆ. ಸಂಪೂರ್ಣ ವ್ಯವಸ್ಥೆಯೊಂದಿಗೆ ಆಗಬೇಕೆಂದರು. ಗೋಷ್ಠಿಯಲ್ಲಿ ರಂಜಿತ್ ಕವಲಪಾರ ಇದ್ದರು.